Breaking News

ಎನ್ ಸಿ ಸಿ ವಿದ್ಯಾರ್ಥಿನಿಯರಿಂದ ವಿಶ್ವ ತಂಬಾಕು ನಿಷೇಧ ದಿನಾಚರಣೆ

ತಂಬಾಕು ಉತ್ಪನ್ನಗಳ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಜಗತ್ತಿನಲ್ಲಿ ತಂಬಾಕು ಸೇವನೆಯಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವದು. ಆದ್ದರಿಂದ ತಂಬಾಕು ಉತ್ಪನ್ನಗಳನ್ನು ಬಳಸದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸ ಬೇಕೆಂದು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ 5 ಕರ್ನಾಟಕ ಗರ್ಲ್ಸ್ ಬಟಾಲಿಯನ್ ದ ಎನ್ ಸಿ ಸಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಜೆ ಎಸ್ ಎಸ್ ಮಹಾವಿದ್ಯಾಲಯದ ವಿಧ್ಯಾರ್ಥಿನಿಯರು ಅಂಬೇಡ್ಕರ್ ನಗರದಲ್ಲಿ ಬೀದಿ ನಾಟಕ ಮೂಲಕ ತಂಬಾಕು ಸೇವನೆಯ ಪರಿಣಾಮ ತಿಳಿಸಿದರು. ಕೆ ಎನ್ ಕೆ ಶಾಲೆಯ ವಿದ್ಯಾರ್ಥಿನಿಯರು ಶಿವಾಜಿ ರೋಡ್ ಮತ್ತು ಕೊಂಡವಾಡ ಓಣಿಯಲ್ಲಿ ರಾಲಿ ಮಾಡಿ ಪೋಸ್ಟರಗಳ ಮುಖಾಂತರ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ತಿಳಿಸಿದರು. ಪ್ರೆಸೆಂಟೇಶನ್ ಶಾಲೆಯ ವಿದ್ಯಾರ್ಥಿನಿಯರು ಸೈದಾಪುರದಲ್ಲಿ ರಾಲಿ ಮುಖಾಂತರ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯಗಳ ಎನ್ ಸಿ ಸಿ ಅಧಿಕಾರಿಗಳಾದ ಮೇಜರ ಮಹಾದೇವಿ ಕೋಟ್ಯಾಳ, ಸೆಕೆಂಡ್ ಆಫೀಸರ್ ಸುಜಾತಾ ಮತ್ತು ಫಸ್ಟ್ ಆಫೀಸರ್ ವಿಕ್ಟೋರಿಯಾ ಉಪಸ್ಥಿತರಿದ್ದರು.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *