Breaking News

ಪ್ರೇಮ ಪ್ರಸ್ತಾಪ ತಿರಸ್ಕಾರ : 14 ಬಾರಿ ಇರಿದ ಯುವತಿಯ ಬರ್ಬರ ಹತ್ಯೆ


ತಮಿಳುನಾಡ : ತಿರುಚ್ಚಿಯಲ್ಲಿ 16 ವರ್ಷದ ಬಾಲಕಿ ತನ್ನ ಪ್ರೀತಿ ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ 22 ವರ್ಷದ ಕೇಶವ ಆಕೆಯನ್ನು 14 ಬಾರಿ ಇರಿದಿದ್ದ.‌ 11ನೇ ತರಗತಿಯಲ್ಲಿ ಓದುತ್ತಿದ್ದ ಆಕೆ ಪರೀಕ್ಷೆ ಮುಗಿಸಿ ತನ್ನ ಸಂಬಂಧಿಯನ್ನು ಭೇಟಿಯಾಗಲು ತೆರಳುತ್ತಿದ್ದಾಗ ಆರೋಪಿ ರೈಲ್ವೇ ಮೇಲ್ಸೇತುವೆ ಬಳಿ ಆಕೆಯನ್ನು ತಡೆದಿದ್ದಾನೆ.ಜೂನ್ 2021 ರಲ್ಲಿ ಅದೇ ಹುಡುಗಿಯನ್ನು ಅಪಹರಿಸಿದ್ದಕ್ಕಾಗಿ ಕೇಶವನ್‌ಗೆ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದ.

ಚೂರಿ ಇರಿತದ ದಿನ ತಾನು ಪ್ರೀತಿಸುತ್ತಿದ್ದೇನೆ ಎಂದು ಆಕೆಗೆ ಹೇಳಿದ್ದಾನೆ. ಆಕೆ ನಿರಾಕರಿಸಿದಾಗ, 14 ಬಾರಿ ಇರಿದಿದ್ದಾನೆ. ಬಳಿಕ ಚಾಕುವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದ. ಆಕೆ ಬಿದ್ದಿರುವುದನ್ನು ಕಂಡ ಪ್ರಯಾಣಿಕರು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೇಶವನ್‌ನನ್ನು ಬಂಧಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು.‌ ಆದರೆ ಕೇಶವನ್ ಶವ‌ ಮನಪ್ಪರೈ ಬಖಿಯ ರೈಲ್ವೆ ಹಳಿ‌ಮೇಲೆ ಪತ್ತೆಯಾಯಿತು.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *