ಕುಂದಗೋಳ : ಪ್ರಯಾಣಿಕರೊಬ್ಬರು ಸಾರಿಗೆ ಬಸ್ ಒಳಗೆ ಮರೆತು ಹೋದ ನಗದು ಹಣ, ಬೆಳ್ಳಿ ಆಭರಣ ಮತ್ತು ಬಟ್ಟೆ ಬರೆ ಇರುವ ಬ್ಯಾಗನ್ನು ಪುನಃ ಪ್ರಯಾಣಿಕರಿಗೆ ತಲುಪಿಸುವ ಮೂಲಕ ಸಾರಿಗೆ ನಿರ್ವಾಹಕ ಮತ್ತು ಚಾಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನವಲಗುಂದ ತಾಲೂಕಿನ ಹಣಸಿ ಗ್ರಾಮದ ಕಮಲಾ ಎಂಬ ಮಹಿಳೆ ಕುಂದಗೋಳ ತಾಲೂಕಿನ ದೇವನೂರು ಗ್ರಾಮಕ್ಕೆ ತೆರಳಲು ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಹೊರಡುವ ಯರಗುಪ್ಪಿ ಬಸ್’ನಲ್ಲಿ ಪ್ರಯಾಣ ಬೆಳೆಸಿದ್ದರು.ಪ್ರಯಾಣ ಮಧ್ಯೆ ಕುಂದಗೋಳದಲ್ಲಿ ಬಸ್’ನಿಂದ ಇಳಿದಾಗ ಬ್ಯಾಗ್ ಮರೆತಿದ್ದರು. ಈ ವೇಳೆ ಪ್ರಯಾಣಿಕರು ಬಿಟ್ಟು ಹೋದ ಬ್ಯಾಗನ್ನು ತೆಗೆದು ಪುನಃ 6 ಗಂಟೆಗೆ ಅದೇ ಕುಂದಗೋಳ ಬಸ್ ನಿಲ್ದಾಣದಲ್ಲಿ ಮಹಿಳೆಗೆ ನಿರ್ವಾಹಕ ಶರೀಫ್ ಸಾಬ್ ನದಾಫ್ ಚಾಲಕ ಬಸವಂತಪ್ಪ ಮಂಟೂರು ನೀಡಿ ಜನರ ಪ್ರಶಂಸೆಗೆ ಪಾತ್ರರಾದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

