Breaking News

ಪುನೀತ್‌ ರಾಜಕುಮಾರ್‌ ಕಂಚಿನ ಪುತ್ಥಳಿ ಅನಾವರಣ….

ಹೊಸಪೇಟೆ (ವಿಜಯನಗರ): ಅಪಾರ ಸಂಖ್ಯೆಯ ಅಭಿಮಾನಿಗಳ ಕರತಾಡನ, ಹೂಮಳೆಯ ನಡುವೆ ನಗರದಲ್ಲಿ ಭಾನುವಾರ ರಾತ್ರಿ ನಟ, ದಿವಂಗತ ಪುನೀತ್‌ ರಾಜಕುಮಾರ್‌ ಅವರ 7.4 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.

ಪುನೀತ್‌ ಅವರ ಅಣ್ಣ, ನಟ ರಾಘವೇಂದ್ರ ರಾಜಕುಮಾರ್‌ ಪುತ್ಥಳಿ ಅನಾವರಣಗೊಳಿಸಿದರು.
ರಾಘವೇಂದ್ರ ರಾಜಕುಮಾರ ಪತ್ನಿ ಮಂಗಳಾ, ನಟ ಅಜೆಯ್‌ ರಾವ್, ಸಚಿವ ಆನಂದ್‌ ಸಿಂಗ್‌, ನಿರ್ಮಾಪಕ ಸಂತೋಷ್‌ ಆನಂದ್‌ ರಾವ್‌ ಇದ್ದರು.

ಪುನೀತ್‌ ಅವರ ಅಭಿಮಾನಿಗಳು, ಅವರ ಭಾವಚಿತ್ರವಿದ್ದ ಟೀ-ಶರ್ಟ್‌, ಧ್ವಜ, ಭಾವಚಿತ್ರ ಹಿಡಿದು ಪಾಲ್ಗೊಂಡಿದ್ದರು. ‘ಅಪ್ಪು’.. ‘ಅಪ್ಪು’.. ‘ಮತ್ತೆ ಹುಟ್ಟಿ ಬನ್ನಿ’ ಎಂದು ಜಯಘೋಷ ಹಾಕಿದರು. ಹೊಸಪೇಟೆ ಕುರಿತು ಪುನೀತ್‌ ಮಾತನಾಡಿದ ಆಡಿಯೋ, ವಿಡಿಯೋ ಇದೇ ವೇಳೆ ಪ್ರಸಾರ ಮಾಡಲಾಯಿತು. ಆಗ ಅಭಿಮಾನಿಗಳ ಜಯಘೋಷ ಮತ್ತಷ್ಟು ಮುಗಿಲು ಮುಟ್ಟಿತ್ತು.

Share News

About admin

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *