Breaking News

ಪಾರ್ಟಿಯಲ್ಲಿ ಗುಂಡಿನ ಸದ್ದು: ಪುಂಡರ ಅಟ್ಟಹಾಸಕ್ಕೆ ಬೆಚ್ಚಿದ ಹುಬ್ಬಳ್ಳಿ ಜನರು…!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗುಂಡಿನ ಸದ್ದು ಮತ್ತೆ ಮೊಳಗಿದೆ. ಹುಟ್ಟು ಹಬ್ಬದ ಪಾರ್ಟಿಯಲ್ಲಿ ಗುಂಡಿನ ಸದ್ದು ಮೊಳಗಿದ್ದು, 100 ಕ್ಕೂ ಹೆಚ್ಚು ರೌಡಿಗಳು ಒಂದಡೇ ಸೇರಿ ಭರ್ಜರಿ ಪಾರ್ಟಿ ಮಾಡುತ್ತಿದ್ದ ವೇಳೆಯಲ್ಲಿ ವೇದಿಕೆಯ ಮೇಲೆ ಆರು ಸುತ್ತು ಗುಂಡು ಹಾರಿಸಿದ ಘಟನೆ ಹುಬ್ಬಳ್ಳಿಯ ಕುಸಗಲ್ ರಸ್ತೆಯ ಕಲಬುರಗಿ ಪಾರ್ಮ್ ಹೌಸ್ ನಲ್ಲಿ ನಡೆದಿದೆ. ಆರ್.ಟಿ.ಐ. ಕಾರ್ಯಕರ್ತ ಪುತ್ರನ ಬರ್ತಡೇ ಪಾರ್ಟಿಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕುಸಗಲ್ ರಸ್ತೆಯ ಕಲಬುರಗಿ ಪಾರ್ಮ್ ಹೌಸ್ ನಲ್ಲಿ ನಡೆದಿದ್ದ‌ ಪಾರ್ಟಿಯಲ್ಲಿ ಕೇಶ್ವಾಪುರದ ಫಿಲೋಮಿನಾ ಪೌಲ್ ಪುತ್ರ ಸುಂದರ ಪೌಲ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗುಂಡಿನ ಸದ್ದು ಮೊಳಗಿದೆ.

ಇನ್ನೂ ರಾತ್ರಿ ಫಾರ್ಮ್ ಹೌಸ್ ನಲ್ಲಿ ಗುಂಡು- ತುಂಡಿನ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದ ತಂಡ ಫಾರ್ಮ್ ಹೌಸ್ ತಲಾಷ್ ಮಾಡಿದೆ. ಹೊಸೂರು, ಸೆಟಲಮೆಂಟ್ ಸೇರಿದಂತೆ ನಗರದ ವಿವಿಧ ಪ್ರದೇಶದ ರೌಡಿಗಳು ಒಂದಡೇ ಸೇರಿಸಿದ್ದು, ಫಿಲೋಮಿನ್ ಬಳಿ ಇದ್ದ ಲೈಸನ್ಸ್ ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯಲ್ಲಿ ರೌಡಿ ಉಪಟಗಳಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಸುಂದರ ಪೌಲ್ ಉಪಟಳ ಇದೇ ಮೊದಲಲ್ಲ. ಈ ಹಿಂದೇ ಕಾಲೇಜ ಕ್ಯಾಂಪಸ್ ನಲ್ಲಿ ಪಿಸ್ತೂಲ್ ತೋರಿಸಿ ಸುದ್ದಿಯಾಗಿದ್ದ ಸುಂದರ ಪೌಲ್.
ಕಾಲೇಜು ಕ್ಯಾಂಟೀನ್ ನಲ್ಲಿ‌ ಪಿಸ್ತೂಲ್ ತೋರಿಸಿ ಸುದ್ದಿಯಾಗಿದ್ದ ಭೂಪ.

Share News

About admin

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *