ಗ್ರಾಹಕರೊಬ್ಬರಿಗೆ ಊಟದಲ್ಲಿ ಮೀಕ್ಷರ್ ಬ್ಲೇಡ್ ಬಂದು ಅನಾಹುತ ಉಂಟಾಗಿ ಗ್ರಾಹಕ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಘಟನೆ ಹುಬ್ಬಳ್ಳಿಯಲ್ಲಿ ನೆಡೆದಿದೆ.


ಎಸ್ ನೀವು ನಂಬದಿದ್ದರೂ ಕೂಡ ನಂಬಲೇ ಬೇಕಾದ ಸುದ್ದಿ ಇದು.ಯಾಕಂದ್ರೆ ನಾವು ನೀವು ಊಟ ಮಾಡೋವಾಗ ಕಡ್ಡಿನೋ ಕೂದಲೋ ಬಂದಿರುತ್ತೇ ಆದ್ರೆ ಮಿಕ್ಷರ್ ಬ್ಲೇಡ್ ಬಂದಿರೋದನ್ನ ಇದೇ ಮೊದಲ ನಾವು ಕೇಳಿದ್ದು.

ಹುಬ್ಬಳ್ಳಿಯ ಮಲ್ಲಿಕಾರ್ಜುನ ಎಂಬುವವರು ನಿನ್ನೆ ಜೊಮ್ಯಾಟೋ ನಲ್ಲಿ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದರು.ಆನ್ಲೈನ್ ನಲ್ಲಿ ಆರ್ಡರ್ ಬರುತ್ತಿದ್ದಂತೆ ಟೊಮ್ಯಾಟೊನವರು ವಿದ್ಯಾನಗರದ ಪಂಜುರ್ಲಿ ಹೋಟೆಲ್ ನಿಂದ ಚಿಕನ್ ಸುಕ್ಕಾ ಪ್ಯಾಕ್ ಮಾಡಿಸಿಕೊಂಡು ಗ್ರಾಹನಿಗೆ ಡೆಲಿವರಿ ಮಾಡಿದ್ದಾರೆ. ಆರ್ಡರ್ ಬಂದ ಮೇಲೆ ಊಟಕ್ಕೆ ಕುಳಿತಾಗ ಕೈ ತುತ್ತಿನಲ್ಲಿ ಮಿಕ್ಷರ್ ಬ್ಲೇಡ್ ಕೈಗೆ ಬಂದಿದೆ. ಇದನ್ನು ಕಂಡ ಗ್ರಾಹಕ ಹೌಹಾರಿದ್ದಾನೆ.ಕೂಡಲೇ ಜೊಮ್ಯಾಟೊ ಹಾಗೂ ಹೋಟೆಲ್ ಗೆ ಕಾಲ್ ಮಾಡಿ ವಿಚಾರಿಸಿದರೇ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಮಲ್ಲಿಕಾರ್ಜುನ ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಖಾಸಗಿ ಹೋಟೆಲ್ ನವರು ಮಾಡುವ ಇಂತಹ ಎಡವಟ್ಟುಗಳಿಗೆ ಆನ್ಲೈನ್ ಪುಡ್ ಆರ್ಡರ ಸೇವೆ ನೀಡುವ ಎಷ್ಟೋ ಕಂಪನಿಗಳಿಗೆ ಕೆಟ್ಟ ಹೆಸರು ಬರುವಂತಾಗಿದ್ದು,ಹೊಟೇಲ್ ಸಿಬ್ಬಂದಿ ಮಾಡಿದ ಎಡವಟ್ಟಿಗೆ ಅಮಾಯಕ ಗ್ರಾಹಕ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾನೆ.
ಒಂದ ವೇಳೇ ಆತ ನೋಡದೇ ಆ ಬ್ಲೇಡ್ ನುಂಗಿ ಬಿಟ್ಟದ್ದರೇ ಮುಂದೆ ಆಗೋ ಅನಾಹುತಕ್ಕೆ ಯಾರು ಹೊಣೆ,ಹಾಗಾಗಿ ಸಂಭಂದಿಸಿದ ಅಧಿಕಾರಿಗಳು ಇಂತಹ ಖಾಸಗಿ ಹೊಟೇಲ್ ಮಾಡುವ ಎಡವಟ್ಟುಗಳಿಗೆ ಆಹಾರ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಇಂತಹ ಎಡವಟ್ಟುಗಳಿಗೆ ಬ್ರೇಕ್ ಹಾಕಬೇಕಿದೆ.

Bigtvnews.com
bigtvnews | Hubli Dharwad News | Kannada News | Karnataka News Hubli News | News In Hubli | Local news

