Breaking News

ಪುತ್ರಿಯ ಬೀದಿ ರಂಪಾಟಕ್ಕೆ ಕ್ಷಮೇಯಾಚಿಸಿದ ಅರವಿಂದ ಲಿಂಬಾವಳಿ


ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೇ ಪೊಲೀಸರಿಗೆ ಅವಾಜ್ ಹಾಕಿದ್ದರು. ಜೊತೆಗೆ ಅಪ್ಪನ ಹೆಸರು ಹೇಳಿಕೊಂಡು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಪುತ್ರಿಯ ಬೀದಿ ರಂಪಾಟ ಮಾಧ್ಯಮಗಳಲ್ಲಿ ಬಿತ್ತರ ಆಗ್ತಿದ್ದಂತೆ ಖುದ್ದು ಶಾಸಕರೇ ಮಗಳು ಮಾಡಿದ ಕೆಲಸಕ್ಕೆ ಕ್ಷಮೆ ಯಾಚಿಸಿದ್ದಾರೆ. ಮಗಳ ಬೀದಿ ರಂಪ ಮಾಧ್ಯಮಗಳಲಿ ಬಿತ್ತರ ಆಗ್ತಿದ್ದಂತೆ ಮೊದಲು ಶಾಸಕರು ಕೂಡ ಗರಂ ಆಗಿದ್ದರು. ಇದೊಂದು ಇಶ್ಯುನಾ? ಕಾಮನ್ ಸೆನ್ಸ್ ಇಲ್ವಾ? ಇದನ್ನೆಲ್ಲಾ ವರದಿ ಮಾಡ್ತಿರಾ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು. ಬಳಿಕ ನನ್ನ ಮಗಳ ನಡೆಯಿಂದ ಯಾರಿಗೇ ನೋವಾಗಿದ್ರು ಕ್ಷಮೆ ಕೇಳ್ತೇನೆ ಎಂದು ಅರವಿಂದ ಲಿಂಬಾವಳಿ ಕ್ಷಮೆ ಯಾಚಿಸಿದ್ರು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *