Breaking News

ಬೆಳಗಾವಿಯಲ್ಲಿ ಗಾಂಜಾ ಮಾರಾಟ, ಗಲಾಟೆ, ಅಪರಾಧ ಕೃತ್ಯ – ಐವರು ದುಷ್ಕರ್ಮಿಗಳ ಗಡೀಪಾರ್‌!

ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಆಯುಕ್ತರು ಖಡಕ್ ಕ್ರಮ ಕೈಗೊಂಡಿದ್ದಾರೆ. ಗಾಂಜಾ ಮಾರಾಟ ಹಾಗೂ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಹಲಗಾ ಗ್ರಾಮದ ಪಿರಾಜಿ ಯಸೂಚಿ, ತಿಲಕವಾಡಿಯ ಯಶ್ ದಾವಲೆ ಹಾಗೂ ಅದಿತ್ಯ ದಾವಲೆ, ಪಾರ್ವತಿ ನಗರದ ಸಂತೋಷ ದಿವಟಗಿ ಮತ್ತು ಮಚ್ಚೆ ಗ್ರಾಮದ ರಫೀಕ ಮಹ್ಮದ ರಫೀಕ ಇಸ್ತಿಯಾಕ ಶೇಖ ಗಡೀಪಾರಾಗಿದ್ದಾರೆ. ಪಿರಾಜಿ, ಯಶ್, ಅದಿತ್ಯ ಮತ್ತು ಸಂತೋಷ್ ಅವರನ್ನು ಆರು ತಿಂಗಳ ಅವಧಿಗೆ ಗಡಿಪಾರು ಮಾಡಲಾಗಿದ್ದರೆ, ರಫೀಕ್ ಶೇಖ್‌ನನ್ನು ಮೂರು ತಿಂಗಳ ಅವಧಿಗೆ ಜಿಲ್ಲೆಯಿಂದ ಹೊರಹಾಕಲಾಗಿದೆ. ಮೇಲ್ಕಂಡ ಎಲ್ಲರೂ ಗಂಭೀರ ಸ್ವರೂಪದ ಹವಲು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು . ಈ ಹಿಂದೆಯೂ ಅವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿ ಜೈಲಿಗೆ ಕಳಿಸಲಾಗಿತ್ತು. ಆದರೆ ಜೈಲಿನಿಂದ ಹೊರಬಂದು ಮತ್ತೆ ತಮ್ಮ ತಂಟೆ ಮುಂದುವರೆಸಿದ್ದರು. ಹೀಗಾಗಿ ಇವರನ್ನು ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ. ಈ ಅವಧಿಯಲ್ಲಿ ಅವರು ತಮ್ಮ ಜಿಲ್ಲೆಯಲ್ಲಿ ಕಾಣಿಸಿಕೊಂಡಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *