Breaking News

ದಾಖಲೆಯ ಸರದಾರಗೆ ಅದ್ದೂರಿ ಸ್ವಾಗತ: ಕಮಲದಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಹುಬ್ಬಳ್ಳಿ: ಸತತ ಎಂಟು ಬಾರಿ ವಿಜಯದ ಪತಾಕೆ ಹಾರಿಸಿದ ಸೋಲಿಲ್ಲದ ಸರದಾರ ಖ್ಯಾತಿಯ ಬಸವರಾಜ ಹೊರಟ್ಟಿಯವರು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಹುಬ್ಬಳ್ಳಿಗೆ ಆಗಮಿಸಿದ ವೇಳೆಯಲ್ಲಿ ಬಿಜೆಪಿಯಿಂದ ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ಮಾಡಲಾಯಿತು.

ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಬಸವರಾಜ ಹೊರಟ್ಟಿ ದಾಖಲೆಯ ಗೆಲುವನ್ನು ಪಡೆದು ಬೆಳಗಾವಿಯಿಂದ ತವರಿಗೆ ಆಗಮಿಸಿದ ಹೊರಟ್ಟಿಯವರಿಗೆ ತೆರೆದ ವಾಹನದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಪಟಾಕಿ ಸಿಡಿಸಿದ ಬಿಜೆಪಿ ಕಾರ್ಯಕರ್ತರು ಮತ್ತೊಮ್ಮೆ ವಿಜಯೋತ್ಸವದ ಆಚರಣೆ ಮಾಡಿದರು

.

ಇನ್ನೂ ಹುಬ್ಬಳ್ಳಿಯ ದೇಶಪಾಂಡೆನಗರ, ಕೇಶ್ವಾಪೂರ, ಸ್ಟೇಷನ್ ರಸ್ತೆ ಹೀಗೆ ಆಯಕಟ್ಟಿನ ಸ್ಥಳಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ ರಾಜ್ಯ ರಾಜಕಾರಣದಲ್ಲಿ ದಾಖಲೆ ನಿರ್ಮಿಸಿದ ಹೊರಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *