Breaking News

ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಅಭಿವೃದ್ಧಿಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಚಾಲನೆ

ಹುಬ್ಬಳ್ಳಿ:ಲೋಕೋಪಯೋಗಿ ಇಲಾಖೆಯು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ 4ರ ಅನುದಾನದಡಿ ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರನಿಂದ ಬ್ಯಾಹಟ್ಟಿ ವರೆಗೆ ರಾ.ಹೆ-28ರ  84.70 ಕಿ.ಮೀ.ದಿಂದ 99.30 ಕಿ. ಮೀ.ವರೆಗಿನ ರಸ್ತೆಯನ್ನು  10 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಕೈಮಗ್ಗ,ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಇತ್ತೀಚೆಗೆ ಚಾಲನೆ ನೀಡಿದರು

.





 ಬೀಡಿ- ಬೆಳವಣಿಕೆ ರಾಜ್ಯ ಹೆದ್ದಾರಿ -56ರ ಬ್ಯಾಲ್ಯಾಳದಿಂದ ಹೆಬ್ಬಾಳದವರೆಗಿನ 62.95 ಕಿ.ಮೀ ಯಿಂದ 69.28 ಕಿ.ಮೀ.ವರೆಗಿನ ರಸ್ತೆಯನ್ನು 2021-22 ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್.ಎಚ್.ಡಿ.ಪಿ)ಅಡಿಯಲ್ಲಿ 10.2 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಇದೇ ಸಂದರ್ಭದಲ್ಲಿ ಹನಸಿ ಗ್ರಾಮದ ಬಳಿ ಚಾಲನೆ ನೀಡಲಾಯಿತು.
 

ಹೆಬಸೂರ ,ಕಿರೇಸೂರ,ಹನಸಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ,ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *