ಬೆಂಗಳೂರು : ನಗರದಲ್ಲಿ ಬುಧವಾರ ಸಂಜೆ ಹಲವೆಡೆ ಗುಡುಗು ಸಹಿತ ಜೋರು ಮಳೆಯಾಗಿದೆ. ಮಳೆಯಿಂದಾಗಿ ವಾಹನ ಸಂಚಾರ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಉಂಟು ಮಾಡಿದೆ.
ಜಯನಗರ, ಚಾಮರಾಜಪೇಟೆ, ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳು, ಯಲಹಂಕ ಭಾಗದ ಚೌಡೇಶ್ವರಿ ವಾರ್ಡ್, ಕೆಂಪೇಗೌಡರ, ಜಕ್ಕೂರು (3 ಮಿ. ಮೀ.), ಹೊರಮಾವು, ಹೆಬ್ಬಾಳ, ವಿಶ್ವನಾಥ ನಾಗೇನಹಳ್ಳಿ, ಕೇಂಗೇರಿ (5.5 ಮಿ.ಮೀ.), ಆರ್ ಆರ್ ನಗರ, ನಾಯಂಡಹಳ್ಳಿ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಸುರಿದಿದೆ.
ಬೆಳಗ್ಗೆಯಿಂದ ನಗರದಲ್ಲಿ ಬಿಸಿಲು ಇತ್ತು. ಸಂಜೆಯಾಗುತ್ತಿದ್ದಂತೆ ಏಕಾಎಕಿ ಮಳೆ ಆರಂಭವಾಯಿತು. ಸಂಜೆ 5.30ರ ನಂತರ ಆರಂಭವಾದ ಮಳೆ ಕೆಲವು ಕಡೆಗಳಲ್ಲಿ ಒಂದೇ ಸಮನೆ ಜೋರಾಗಿ ಸುರಿದರೆ, ಕೆಲವು ಪ್ರದೇಶಗಳಲ್ಲಿ ಜಿಟಿ ಜಿಟಿ ರೂಪದಲ್ಲಿ ಸುರಿಯಿತು. ರಸ್ತೆಯುದ್ಧಕ್ಕೂ ಮಳೆ ನೀರು ಹರಿದು ವಾಹನ ಸವಾರರು ಪರದಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





