Breaking News

ಆ.21ರಂದು 185ನೇ ಛಾಯಾಗ್ರಹಣ ದಿನಾಚರಣೆ

ಧಾರವಾಡ: ಧಾರವಾಡ ಫೋಟೊ ಮತ್ತು ವಿಡಿಯೋಗ್ರಾಫರ್ಸ್ ಸಂಘದ ವತಿಯಿಂದ 185ನೇ ಛಾಯಾಗ್ರಹಣ ದಿನಾಚರಣೆ ಆ.21ರಂದು ಬೆಳಗ್ಗೆ 9:30ಕ್ಕೆ ನಗರದ ಕನ್ನಡ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಾಹುಲ್ ದತ್ತಪ್ರಸಾದ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಯಾಗಿ ಮಂಜುನಾಥ ಸುಳ್ಳೋಳ್ಳಿ ಆಗಮಿಸುವರು. ಪೃಥ್ವಿರಾಜ್ ಮಿಸ್ಕಿನ್, ಮುರಲಿಧರ ಮಲಿಜಿ, ಶ್ರೀನಿವಾಸ ಮಲಿಜಿ ಉಪಸ್ಥಿತರಿರುವರು. ರಾಹುಲ್ ದತ್ತಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಧಾರವಾಡದ ಪತ್ರಿಕಾ ಛಾಯಾಗ್ರಾಹಕರಾದ ಬಸವರಾಜ ಆನೇಗುಂದಿ, ಮಿಲಿಂದ ಪಿಸೆ ಹಾಗೂ ಶಿವಲಿಂಗ ಪಾಟೀಲ ಅವರಿಗೆ “ಹೆಮ್ಮೆಯ ಧಾರವಾಡಿಗ’ ಬಿರುದು ನೀಡಿ ಗೌರವಿಸಲಾಗುವುದು. 6 ಜನ ಹಿರಿಯ ಛಾಯಾಗ್ರಾಹಕರನ್ನು ಸತ್ಕರಿಸಲಾಗುವುದು. ನಂತರ ಸಾಂಸ್ಕಂತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರವಿ ಯಾಲಕ್ಕಿಶೆಟ್ಟರ, ಲಕ್ಷ್ಮಣ ದಾನಪ.ಗೌಡರ, ಪ.ದಿ.ರಾಜ್ ಮಿಸಿ.ನ್. ಮುರಳಿ ಮಲಿಜಿ ಇತರರು ಉಪಸ್ಥಿತರಿದ್ದರು.

Share News

About Shaikh BigTv

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *