ನವಲಗುಂದ : ಮನೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಪಟ್ಟಣದ ಹೆಬಸೂರ ಪ್ಲಾಟ್‌ನಲ್ಲಿ ಘಟನೆ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ . ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮೋಹನರೆಡ್ಡಿ ರಾಮರೆಡ್ಡಿ ಕರಿಯತ್ತಿನ ಎಂದು ತಿಳಿದು ಬಂದಿದ್ದು ,
ರಾತ್ರಿಯಿಂದ ಮನೆಯ ಬಾಗಿಲು ತೆರೆದಿರಲಿಲ್ಲ ಎನ್ನಲಾಗಿದ್ದು , ಬೆಳಗಿನಜಾವ ಕಿಟಕಿಯಿಂದ ನೋಡಿದಾಗ ಘಟನೆ ತಿಳಿದಿದೆ . ತಕ್ಷಣ ಆತನ ಸಹೋದರ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಲೇ ಸ್ಥಳಕ್ಕೆ ನವಲಗುಂದ ಪೊಲೀಸ್ ಠಾಣೆಯ ಪಿಎಸ್‌ಐ ಕಲ್ಮಶ ಬೆನ್ನೂರ ಭೇಟಿ ನೀಡಿ , ಪರಿಶೀಲನೆ ನಡೆಸಿದರು
ನಂತರ ಸ್ಥಳೀಯರ ಸಹಾಯದಿಂದ ಶವವನ್ನು ನವಲಗುಂದ ತಾಲೂಕಾ ಆಸ್ಪತ್ರೆಗೆ ರವಾನಿಸಲಾಯಿತು .
bigtvnews | Hubli Dharwad News | Kannada News | Karnataka News Hubli News | News In Hubli | Local news





