ಹುಬ್ಬಳ್ಳಿ : ಖ್ಯಾತ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಹತ್ಯೆ ಮಾಡಿರುವುದು ಅಮಾನವೀಯವಾಗಿದೆ . ಗುರೂಜಿ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ .
ಯಾರಿಗೂ ಕೂಡ ಅನ್ಯಾಯ ಮಾಡದ ಗುರೂಜಿಯನ್ನು ಹಂತಕರು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾರೆ . ಚಂದ್ರಶೇಖರ ಗುರೂಜಿಯವರನ್ನು ನಂಬಿಕೊಂಡು ಅದೆಷ್ಟೋ ಕುಟುಂಬಗಳು ಬದುಕುತ್ತಿದ್ದವು .
ಆದ್ರೆ ಅವೆಲ್ಲ ಕುಟುಂಬಗಳು ಈಗ ಅನಾಥವಾಗಿವೆ . ಇಷ್ಟೆಲ್ಲಾ ಅವರು ಬೆಳೆದರು ಕೂಡ ಸಂಬಂಧಿಕರನ್ನು ಬಿಟ್ಟಿರಲಿಲ್ಲಾ . ಸದ್ಯ ಅವರಿಲ್ಲದ್ದನ್ನು ನೆನೆಸಿಕೊಳ್ಳಲು ಆಗುತ್ತಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು .
bigtvnews | Hubli Dharwad News | Kannada News | Karnataka News Hubli News | News In Hubli | Local news





