ಧಾರವಾಡ : ವಾಸವಿ ಜಯಂತಿ ಅಂಗವಾಗಿ ರಜತ ಪಲ್ಲಕ್ಕಿಯಲ್ಲಿ ಶ್ರೀ ವಾಸವಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದರು.
ಧಾರವಾಡದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು . ಜಾಂಜ್ ಮೇಳದೊಂದಿಗೆ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಸಿದರು . ಶ್ರೀ ವಾಸವಿ ಉತ್ಸವ ಮೂರ್ತಿ ಪಲ್ಲಕ್ಕಿ ಉತ್ಸವವನ್ನು ಭಾರಿ ಸಡಗರ ಸಂಭ್ರಮದಿಂದ ಮಹಿಳಾ ಮಣಿಗಳು ಕುಂಭ ಮೇಳ ಹೊತ್ತು ಧಾರವಾಡದ ಮಂಗಳವಾರ ಪೇಟ , ರವಿವಾರ ಪೇಟ , ಗಾಂಧಿ ಚೌಕ ದತ್ತ ಮಂದಿರದರ , ಹೊಸಯಲ್ಲಾಪುರ ರಸ್ತೆ , ಕಾಮನಕಟ್ಟಿ ಸೇರಿದ ಮಾರ್ಗದ ಮುಖಾಂತರ ನಗರೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ತಲುಪಿಸಿದರು . ಪಲ್ಲಕ್ಕಿ ಉತ್ಸವದಲ್ಲಿ ಸುಮಂಗಲಿ ಮಹಿಳೆಯರು ಕುಂಭಮೇಳದೊಂದಿಗೆ , ಸಮಾಜದ ಗಣ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

