ಹೈದರಾಬಾದ್ (ತೆಲಂಗಾಣ): ಭೂಮಿ ಗುತ್ತಿಗೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಇಂದು ಸಿಟಿ ಸಿವಿಲ್ ಕೋರ್ಟ್ಗೆ ಹಾಜರಾಗಿದ್ದಾರೆ.
2014ರಲ್ಲಿ ಫಿಲಂ ನಗರದಲ್ಲಿನ ಜಾಗವನ್ನು ಕಂಪನಿಯೊಂದು ಲೀಸ್ಗೆ ಪಡೆದಿತ್ತು. ಆದರೆ, ಆ ಕಂಪನಿಯ ಮಾಲೀಕರ ಮಗ ರಾಣಾ ಹೆಸರಿಗೆ ಜಮೀನು ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೇ ಪ್ರಕರಣದ ಕುರಿತಂತೆ ಈ ಹಿಂದೆ ಸಿಟಿ ಸಿವಿಲ್ ಕೋರ್ಟ್ ರಾಣಾ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಣಾ ಇಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದ ನಂತರ ಹೊರಬಂದ ರಾಣಾ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಹೊರಟು ಹೋದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





