ಹುಬ್ಬಳ್ಳಿ:ರೇಲ್ವೆ ಇಲಾಖೆ ಆಲಷ್ಯತನವೋ ಅಥವಾ ನಿರ್ಲಕ್ಷ್ಯತನೋ ಗೊತ್ತಿಲ್ಲಾ. ಬ್ರಿಡ್ಜ್ ಕೆಳಗೆ ಹಾಕಿದ ಕಬ್ಬಿಣದ ಬ್ರಹತ್ ಎಂಗಲರೊಂದು ಕೆಳಗೆ ಬಿದ್ದು ಕೂದಲೆಳೆಯ ಅಂತರದಲ್ಲಿ ಬಹುದೊಡ್ಡ ದುರಂತವೊಂದು ತಪ್ಪಿದೆ.ಎಂಗಲರ್ ಕೆಳಗೆ ಬೀಳುವ ದ್ರಶ್ಯ ಎದೆ ಝಲ್ ಎನಿಸುವಂತಿದೆ.ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಬಳಿ ನೆಲಕ್ಕಪ್ಪಳಿಸಿದ ಬೃಹತ್ತಾಕಾರದ ಕಬ್ಬಿಣದ ಕಂಬ.ಬ್ರಿಡ್ಜ್‌ಬಳಿ ಬೃಹತ್ ವಾಹನಗಳ ಪ್ರವೇಶ ನಿರ್ಬಂಧಿಸುವ ದೃಷ್ಟಿಯಿಂದ ಹಾಕಲಾಗಿದ್ದ ಕಬ್ಬಿಣದ ಬೃಹತ್ ಕಂಬ. ತುಕ್ಕು ಹಿಡಿದು ತನ್ನಷ್ಟಕ್ಕೆ ತಾನೆ ನೆಲಕ್ಕುರುಳಿದೆ.ಕಳೆದ ಮೂರು ತಿಂಗಳ ಹಿಂದೆ ಅಷ್ಟೇ ಈ ರೀತಿಯ ದುರ್ಘಟನೆ ನಡೆದಿತ್ತು. ಆದ್ರೂ ಎಚ್ಚೆತ್ತುಕೊಳ್ಳದ ರೇಲ್ವೆ ಇಲಾಖೆಯ ಅಧಿಕಾರಿಗಳ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜನತೆ, ಬಸ್, ಕಾರು, ದ್ವಿಚಕ್ರ ವಾಹನಗಳು ಹಾಯ್ದು ಹೋದ ಕೆಲವೇ ಕ್ಷಣಗಳಲ್ಲಿ ಕಂಬ ಉರಳಿಬಿದ್ದಿದೆ.ಬಸ್ ಅಥವಾ ಕಾರಗಳ ಮೇಲೆ ಬಿದ್ದಿದ್ದರೇ ನಡೆದು ಹೋಗುತ್ತಿತಿತ್ತು
ಜನದಟ್ದೆಣೆ ಪ್ರದೇಶ ಹಾಗೂ ಹುಬ್ಬಳ್ಳಿ-ಗದಗ ಎನ್‌ಎಚ್-63 ರಸ್ತೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ನಡೆದ ಬಹುದೊಡ್ಡ ಘಟನೆ ಇದಾಗಿದ್ದು
ದಿವ್ಯ ನಿರ್ಲಕ್ಷ್ಯ ವಹಿಸಿದ ರೇಲ್ವೆ ಇಲಾಖೆಯ ಅಧಿಕಾರಗಳ ವಿರುದ್ಧ ಕ್ರಮಕ್ಕೆ ಹುಬ್ಬಳ್ಳಿಯ ಜನರ ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





