ಬೆಂಗಳೂರು: ಸ್ಯಾಂಡಲ್ ವುಡ್ ಸೇರಿದಂತೆ ವಿವಿಧ ಭಾಷಾ ಚಿತ್ರಗಳ ಮೂಲಕ ಬಹುಭಾಷಾ ನಟರಾಗಿ ಗುರ್ತಿಸಿಕೊಂಡಿರುವಂತ ನಟ ಅರ್ಜುನ್ ಸರ್ಜಾ ಅವರ ತಾಯಿ, ಇಂದು ನಿಧನರಾಗಿದ್ದಾರೆ. ಈ ಮೂಲಕ ನಟ ಅರ್ಜುನ್ ಸರ್ಜಾ ಅವರು ಮಾತೃವಿಯೋಗ ಎದುರಿಸುವಂತೆ ಆಗಿದೆ.
ಇಂದು ಬೆಳಿಗ್ಗೆ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀದೇವಿ(85) ಅವರು, ಅನಾರೋಗ್ಯದಿಂದಾಗಿ ನಗರದ ಅಪೊಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಅಂದಹಾಗೇ ಶಕ್ತಿ ಪ್ರಸಾದ್ ಅವರ ಪತ್ನಿಯಾಗಿದ್ದಂತ ಲಕ್ಷ್ಮೀದೇವಿ ಅವರು, ಕಳೆದ ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದರು. ಅವರು ನಗರದ ಅಪೊಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಅವರು ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





