ಹುಬ್ಬಳ್ಳಿ: ನಿರಾಮಯ ಫೌಂಡೇಶನ್ ಹುಬ್ಬಳ್ಳಿ ಇವರ ವತಿಯಿಂದ ಕಾರ್ಗಿಲ್ ವಿಜಯ ದಿವಸ ಹಾಗೂ ಅಮೃತ ಸ್ವಾತಂತ್ರೋತ್ಸವದ ಪ್ರಯುಕ್ತ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಇವರ ಸಂಯೋಜನೆ ಯೊಂದಿಗೆ ಜುಲೈ ೨೬ ಮುಂಜಾನೆ ೮ ಗಂಟೆಗೆ ಸವಾಯಿ ಗಂಧರ್ವ ಹಾಲ್ ನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ನ ಸಂಚಾಲಕ ಗುರು ಬನ್ನಿಕೋಪ್ಪ ಹೇಳಿದರು.
ನಗರದಲ್ಲಿಂದು ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು ರಕ್ತದಾನ ಶಿಬಿರದೊಂದಿಗೆ ಹಾಲಿ, ಮಾಜಿ, ಹುತಾತ್ಮ ವೀರಯೋಧರಿಗೆ ಕುಟುಂಬ ವರ್ಗ ಮತ್ತು ಯುವಸಾಧಕರು ಸೇರಿದಂತೆ ೭೫ ಜನರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮ ದ ಸಾನಿದ್ಯವನ್ನು ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ವಹಿಸುವರು, ದಿಕ್ಸೂಚಿ ನುಡಿಗಳನ್ನು ಸಾತ್ಯಕಿ ಸಾವರ್ಕರ್ ಮಾತನಾಡಯವರು ಮತ್ತು ಅಧ್ಯಕ್ಷತೆಯನ್ನು ಫೌಂಡೇಶನ್ ನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ವಯಿಸಲಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





