ಧಾರವಾಡ: ಸಿಎಂ ದೆಹಲಿ ಪ್ರವಾಸ ರಾಷ್ಟ್ರಪತಿ ಪ್ರಮಾಣ ವಚನಕ್ಕೆ ಮಾತ್ರ ಹೋಗಿದ್ದು.ಸಂಪುಟ ವಿಸ್ತರಣೆ ಆದಾಗ ನಾಯಕರು ಅದಕ್ಕಾಗಿಯೇ ಕರೆಯುತ್ತಾರೆ .ಆಗ ಹೋಗುತ್ತಾರೆ ಇದೀಗ ರಾಷ್ಟ್ರಪತಿ ಅಧಿಕಾರ ಸ್ವೀಕಾರಕ್ಕೆ ಹೋಗಿದ್ದಾರೆ.ಸಿದ್ದರಾಮೋತ್ಸವ ಕೇವಲ ಅವರ ಅಸ್ತಿತ್ವಕ್ಕೆ ಮಾಡುಕೊಳ್ಳುತ್ತಿರೋ ಉತ್ಸವ ಎಂದು ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಯಾವ ಜನಪರವಾಗಿ ಇಲ್ಲದ ಉತ್ಸವ ಅದು. ಅವರವರ ಅಸ್ತಿತ್ವಕ್ಕಾಗಿ ಈ ಉತ್ಸವ ಮಾಡಿಕೊಳ್ಳುತ್ತಿದ್ದಾರೆ.ಇದರಿಂದ ಯಾವುದೇ ರೀತಿಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲ್ಲ.ಬೇಬಿ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆಗೆ ಚಿಂತನೆ ಹಿನ್ನೆಲೆ ಅಲ್ಲಿನ ಜನರು ಅದಕ್ಕೆ ವಿರೋಧಿಸಿದ್ದಾರೆ.ಹೀಗಾಗಿ ಅಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿದೆಆದ್ರೆ ತಜ್ಞರು ಬಂದು ಅಲ್ಲಿ ಪರೀಕ್ಷೆ ಮಾಡಲಿದ್ದಾರೆ .ಆಮೇಲೆ ಅದರ ಬಗ್ಗೆ ಗಣಿಗಾರಿಕೆ ಬೇಕೋ ಬೇಡವೋ ಎಂದು ತೀರ್ಮಾನಿಸಲಾಗುತ್ತೆ .ಆರ್ ಎಸ್ ಎಸ್ ಬಗ್ಗೆ ಸಾಹಿತಿ ಭಗವಾನ್ ಸುಳ್ಳು ಸಂಘ ಎನ್ನುವ ಹೇಳಿಕೆ ವಿಚಾರ ಯಾವ ಮನುಷ್ಯನಿಗೆ ಒಬ್ಬರ ಬೆಳವಣಿಗೆಯನ್ನ ಸಹಿಸೋಕೆ ಆಗೋದಿಲ್ಲವೋ ಅವರು ಸಹಜವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ.ಅವರ ವ್ಯಕ್ತಿತ್ವ ಮತ್ತು ವಿಚಾರಗಳನ್ನ ಈ ಮೂಲಕ ಹೊರಹಾಕುತ್ತಾರೆ. ಅದಕ್ಕೆ ಹೆಚ್ಚು ಒತ್ತು ಕೊಡುವಂತಹ ಅವಶ್ಯಕತೆ ಇಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





