Breaking News

ಮಾತ್ರೆಗಳನ್ನು ಸೇವಿಸಿ 55 ಮಕ್ಕಳು ಅಸ್ತವ್ಯಸ್ತ : ಆಸ್ಪತ್ರೆಗೆ ದಾಖಲು


ಸವದತ್ತಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬಸಿಡೋಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ , ಕಬ್ಬಿಣಾಂಶ (ಪಾಲಿಕ್‌ ಆಸಿಡ್‌)ವುಳ್ಳ ಮಾತ್ರೆಗಳನ್ನು ಸೇವಿಸಿದ ಬಳಿಕ 55 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಎಲ್ಲರನ್ನೂ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಟ್ಟು 239 ಮಕ್ಕಳು ಬಿಸಿಯೂಟ ಮಾಡಿದರು. ಊಟದ ಬಳಿಕ ಪ್ರತಿ ಸೋಮವಾರ ಕಬ್ಬಿಣಾಂಶದ ಮಾತ್ರೆ ನೀಡುವುದು ರೂಢಿ. ಅದೇ ರೀತಿ ಈ ಸೋಮವಾರ ಕೂಡ ಎಲ್ಲ ಮಕ್ಕಳಿಗೂ ಊಟದ ಬಳಿಕ ಮಾತ್ರೆ ನೀಡಲಾಗಿತ್ತು. ಸಂಜೆ 7.30ರ ಸುಮಾರಿಗೆ ಹಲವು ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಅದರಲ್ಲಿ 55 ವಿದ್ಯಾರ್ಥಿ- ವಿದ್ಯಾರ್ಥಿನಿಯರು ತೀವ್ರ ನೋವು ಉಂಟಾಗಿದ್ದರಿಂದ ತಕ್ಷಣ ಅವರನ್ನು ಆಂಬುಲೆನ್ಸ್‌ ಸಹಾಯದಿಂದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು.

‘ಆಸ್ಪತ್ರೆಗೆ ಬಂದ ಎಲ್ಲ ಮಕ್ಕಳಿಗೂ ಸಲೈನ್‌ ಹಚ್ಚಲಾಗಿದೆ. ಯಾರಿಗೂ ಪ್ರಾಣಾಪಾಯ ಇಲ್ಲ. ಮಕ್ಕಳು ಅಸ್ವಸ್ಥರಾಗಲು ಮಧ್ಯಾಹ್ನದ ಊಟ ಕಾರಣವೋ ಅಥವಾ ಮಾತ್ರೆ ಕಾರಣವೋ ಇನ್ನೂ ಗೊತ್ತಾಗಿಲ್ಲ. ರಾತ್ರಿಯಿಡೀ ಮಕ್ಕಳ ಮೇಲೆ ನಿಗಾ ಇಡಲಾಗುವುದು. ಈಗಾಗಲೇ ಕೆಲವು ಮಕ್ಕಳು ಚೇತರಿಸಿಕೊಂಡಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ ತಿಳಿಸಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *