Breaking News

ಪಬ್‌ನವರೇ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದರು : ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌


ಮಂಗಳೂರು: ನಗರದ ಪಬ್‌ವೊಂದಕ್ಕೆ ರಾತ್ರಿ ಸಂಘಟನೆಯೊಂದರ ಸದಸ್ಯರು ತೆರಳಿದ್ದ ಸಂದರ್ಭದಲ್ಲಿ ಪಬ್‌ನವರೇ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದರು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ರಾತ್ರಿ 9 ಗಂಟೆಯ ಸುಮಾರಿಗೆ ಸಂಘ ಟನೆಯೊಂದರ ಸದಸ್ಯರೆಂದು ಹೇಳಿಕೊಂಡ 5-6 ಮಂದಿ ರೆಸ್ಟೋರೆಂಟ್‌ ಕಂ ಪಬ್‌ವೊಂದಕ್ಕೆ ತೆರಳಿ ಬೌನ್ಸರ್‌ನ ಜತೆಗೆ ಮಾತನಾಡಿ, “ಅಪ್ರಾಪ್ತ ವಯಸ್ಕ ಬಾಲಕ ಬಾಲಕಿಯರಿಗೆ ಮದ್ಯ ಪೂರೈಕೆ ಮಾಡುತ್ತಿದ್ದೀರಿ. ಇದರ ಬಗ್ಗೆ ಹಲವು ಬಾರಿ ಹೇಳಿದರೂ ನಿಲ್ಲಿಸಿಲ್ಲ. ಅಪ್ರಾಪ್ತ ವಯಸ್ಕರನ್ನು ಹೊರಗೆ ಕಳುಹಿಸುವಂತೆ ಮ್ಯಾನೇಜರ್‌ಗೆ ತಿಳಿಸಿ’ ಎಂದು ಹೇಳಿದರು. ಅದರಂತೆ ಮ್ಯಾನೇಜರ್‌ ಪಾರ್ಟಿಗೆ ಬಂದಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದಾರೆ ಎಂದು ಆಯುಕ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *