ಧಾರವಾಡ : ಬಿಜೆಪಿ ಯುವ ಮುಖಂಡ ಪ್ರವೀಣ ಹತ್ಯೆ ಈ ಕೌರ್ಯ ಹದ್ದುಬಸ್ತಿನಲ್ಲಿಡುವ ಕಾರ್ಯ ಸರ್ಕಾರ ಕೂಡಲೇ ಮಾಡಬೇಕು.ಇಲ್ಲದೇ ಹೋದಲ್ಲಿ ಇನ್ನೂ ಸಾಕಷ್ಟು ಹಿಂದೂಗಳ ಬಲಿಯಾಗುತ್ತೇ ಅನಿಸುತ್ತಿದೆ. ಸರ್ಕಾರ ಈ ವಿಷಯದಲ್ಲಿ ವಿಫಲ ಆಗುತ್ತಿದೆ. ಕೊಲೆ, ಹಲ್ಲೆ, ಗಲಾಟೆಯಾದಾಗ ಉಗ್ರವಾದ ಹೇಳಿಕೆಗಳು ಬರುತ್ತಾವೆ, ಆದರೆ ಮುಂದೆ ಏನು ಇನ್ನುವರೆಗೆ ಯಾವುದೇ ರೀತಿಯ ಕಠಿಣ ಪ್ರಕ್ರಿಯೆ ನಡೆದಿಲ್ಲ. ಇದೇ ಕಾರಣಕ್ಕೆ ಪ್ರವೀಣ ಹತ್ಯೆ ಆಗಿದೆ.ಎಸ್‌ಡಿಪಿಐ, ಪಿಎಫ್ಐ ಬ್ಯಾನ್ ಮಾಡಬೇಕು. ಇಲ್ಲವೇ ಸಿಎಂ ರಾಜೀನಾಮೆ ಕೊಡಬೇಕು.ಇನ್ನೂ ಅದೆಷ್ಟು ಬಲಿ ಕೊಡಬೇಕು ಮಾಡಿದೀರಿ. ಇದಕ್ಕೆ ಬಿಜೆಪಿಯೇ ಕಾರಣ.
ಬ್ಯಾನ್ ಮಾಡದೇ ಇದ್ದುದ್ದಕ್ಕೆ ಈ ಕೊಲೆ ಅಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾನೂನು, ಸರ್ಕಾರದ ವೈಫಲ್ಯ. ಬಿಜೆಪಿಗೆ ಹಿಂದೂಗಳ ಸುರಕ್ಷತೆ ಕಾಳಜಿಯಿದ್ದಲ್ಲಿ ಎಸ್‌ಡಿಪಿಐ, ಪಿಎಫ್ಐ ಬ್ಯಾನ್ ಮಾಡಬೇಕು. ಹತ್ಯೆ ಹಿಂದೆ ಕೇರಳದ ಮೂಲ ಅಂತಾ ಹೇಳುತ್ತಿದ್ದಾರೆ. ವಾರದ ಹಿಂದೆ ನಡೆದ ಹತ್ಯೆಗೆ ಸೇಡಿಗೆ ಮಾಡಿದ್ದಾರೆ ಅಂತಾನೂ ಹೇಳುತ್ತಿದ್ದಾರೆ. ಮುಸ್ಲಿಂರು ಮಾಡಿರೋ ಲಕ್ಷಾಂತರ ಕೊಲೆಗಳಿಗೆ ನಾವು ತಿರುಗಿ ಬಿದ್ರೆ ದೇಶದಲ್ಲಿ ಒಬ್ಬನೂ ಮುಸ್ಲಿಂ ಇರಬಾರದು. ಆದರೆ ಆ ಮಾನಸಿಕತೆ ಇರಬಾರದು, ಕೊಲೆಗೆ ಕೊಲೆಯೇ ಉತ್ತರ ಅಲ್ಲ.ನ್ಯಾಯಕ್ಕೆ ನ್ಯಾಯಾಲಯ ಇದೆ, ಪೊಲೀಸ್ ಠಾಣೆ ಇದೆ.ಸಂವಿಧಾನ ಬದ್ಧವಾದ ಹೋರಾಟಕ್ಕೆ ಅವಕಾಶ ಇದೆ.ಮುಲ್ಲಾ ಮೌಲ್ವಿಗಳು ಎಸ್‌ಡಿಪಿಐ, ಪಿಎಫ್‌ಐ ಹದ್ದುಬಸ್ತಿನಲ್ಲಿ ಇಡಬೇಕು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





