ಹುಬ್ಬಳ್ಳಿ: ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಮಹಿಳಾ ಅಭಿರುದ್ದಿ ಇಲಾಖೆ ಅಡಿ ಅಮೃತ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ನೀಡುತ್ತಿರುವ ಬಡ್ಡಿ ರಹಿತ ಸಾಲ ಯೋಜನೆ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕಿ ಕುಸುಮಾವತಿ ಚ ಶಿವಳ್ಳಿ ಹೇಳಿದರು.
ನೂಲ್ವಿ ಗ್ರಾಮದ ರೇಣುಕಾಚಾರ್ಯ ವಿದ್ಯಾಲಯದ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಾಲ ಸೌಲಭ್ಯದ ಚೆಕ್ ವಿತರಣಾ ಸಮಾರಂಭದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ರೂ.50 ಲಕ್ಷದ ಮೊತ್ತದ ಚೆಕ್ ವಿತರಿಸಿ ಮಾತನಾಡಿ, ಈ ಮೊತ್ತವನ್ನು 35 ಸ್ತ್ರೀ ಶಕ್ತಿ ಸಂಘಗಳ 500 ಮಹಿಳಾ ಸದಸ್ಯರಿಗೆ ನೀಡಲಾಗಿದೆ. ಪಡೆದ ಹಣವನ್ನು ಉದ್ದೇಶಿತ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಿ, ಸಕಾಲಕ್ಕೆ ಸಾಲ ಮರುಪಾವತಿ ಮಾಡುವುದರ ಮೂಲಕ ರಾಜ್ಯದ ಮಹಿಳೆಯರಿಗೆ ಮಾದರಿಯಾಗಬೇಕು ಎಂದು ಹೇಳಿದರು.
‘ನಿಮ್ಮೆಲ್ಲರ ಆಶೀರ್ವಾದದಿಂದ ವಿಧಾನ ಸಭೆ ಪ್ರವೇಶಿಸಿದ್ದೇನೆ. ನನಗೆ ಕ್ಷೇತ್ರದ ಜನರೇ ದೇವರು. ಅವರ ಸೇವೆಗೆ ಸದಾ ಸಿದ್ಧನಾಗಿದ್ದೇನೆ. ಸಾಲದ ರಥ ನಿಲ್ಲುವುದಿಲ್ಲ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಪೂರಕವಾದ ನೆರವು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇತೆ’ ಎಂದು ಹೇಳಿದರು.
ಬಡವರ ಬದುಕು ಹಸನುಗೊಳಿಸಲು ನನ್ನ ಜೀವನವನ್ನು ಕರ್ಪೂರದಂತೆ ಕರಗಿಸುತ್ತಿದ್ದೇನೆ. ಜನ ಶಕ್ತಿಯೇ ನನಗೆ ಶ್ರೀರಕ್ಷೆ. ಅವರು ಕೊಟ್ಟ ಶಕ್ತಿಯನ್ನು ಅವರ ಒಳಿತಿಗಾಗಿಯೇ ಬಳಸುತ್ತೇನೆ.
ಎಂದಿಗೂ ಜನಪರ ನಿಲುವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ‘ ಎಂದು ಹೇಳಿದರು.
ಸಾಲ ಪಡೆದ ಮಹಿಳೆಯರ ಪಾಲಿಗೆ ಬ್ಯಾಂಕ್ ದೇವಾಲಯ ಇದ್ದಂತೆ. ಸಾಲ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ, ಮರುಪಾವತಿ ಮಾಡುವುದರ ಮೂಲಕ, ಇನ್ನಷ್ಟು ಮಂದಿ ಸಾಲ ಪಡೆಯಲು ಅನುವು ಮಾಡಿಕೊಡಬೇಕು. ಮರೆಯಲಾಗದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಶು ಯೋಜನಾಧಿಕಾರಿ ದೀಪಾ ಜಾವೋರ, ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಸೇರಿದಂತೆ ಗ್ರಾಮದ ಸ್ಥಳೀಯ ಮುಖಂಡರು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





