ಹುಬ್ಬಳ್ಳಿ: ನಿರಂತರವಾಗಿ ಕುರಿಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು, ಪೊಲೀಸರು ಅಟ್ಟಾಡಿಸಿ ಹಿಡಿದು, ಕೈಕಾಲು ಕಟ್ಟಿ ಎಳೆದುಕೊಂಡು ಹೋದ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗದಲ್ಲಿ ನಡೆದಿದೆ.
ಈ ಖದೀಮ ಧಾರವಾಡದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಕುರಿಗಳನ್ನು ಕಳ್ಳತನ ಮಾಡಿ ಮಾಡುತ್ತಿದ್ದನಂತೆ. ಅದೆಷ್ಟೋ ಬಾರಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದನಂತೆ. ಸಿಸಿ ಟಿವಿಯಲ್ಲಿ ಇವನ ಓಡಾಟ ತಿಳಿದುಕೊಂಡು ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಇರುವುದನ್ನು ಖಚಿತ ಪಡೆದುಕೊಂಡ ಧಾರವಾಡ ಪೊಲೀಸರು, ಹುಬ್ಬಳ್ಳಿ ಪೊಲೀಸರ ಸಹಾಯದಿಂದ ಅವನನ್ನು ಅಟ್ಟಾಡಿಸಿ ಹಿಡಿದು ಕೈಕಾಲು ಕಟ್ಟಿ ಎಳೆದುಕೊಂಡು ಹೋಗಿದ್ದಾರೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





