‘
ಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಕಳೆದಬಾರಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಎರಡು ಕಿಲೋಮೀಟರ್ ಉದ್ದ ಹಾಗೂ ಒಂಬತ್ತು ಪೂಟ ಅಗಲದ ರಾಷ್ಟ್ರಧ್ವಜ ಮೆರವಣಿಗೆ ಮಾಡುವ ಮೂಲಕ ತಾಲೂಕಿನಲ್ಲಿ ದಾಖಲೆ ನಿರ್ಮಿಸಿದ್ದು ಇತಿಹಾಸ ಪುಟ ಸೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಈ ಬಾರಿ ಎಪ್ಪತೈದನೆ ಸ್ವತಂತ್ರ ಅಮೃತ ಮಹೋತ್ಸವ ಅಂಗವಾಗಿ ಮತ್ತೊಂದು ದಾಖಲೆ ನಿರ್ಮಿಸಲು ಹೊರಟಿದ್ದಾರೆ ಆದೆನು ಅಂದರೆ ಸುಮಾರು ಒಂಬತ್ತು ಕಿಲೋಮೀಟರ್ ಉದ್ದದ ರಾಷ್ಟ್ರಧ್ವಜ ಮೆರವಣಿಗೆ ಮಾಡಲು ತಯಾರಿ ನಡೆಸಿದ್ದಾರೆ.ಇವೊಂದು ಒಂದು ಮೆರವಣಿಗೆಯಲ್ಲಿ ಲಕ್ಷಾಂತರ ಜನರು -ಚಾಲಕ ಸಂಭವವಿದ್ದು ಎಲ್ಲರಿಗೂ ಉಟದ ವೆವಸ್ಥೆ ಕೂಡ ಮಾಡಲಾಗಿದೆ ಎಂದು ಸ್ವತಃ ಸಂತೋಷ ಲಾಡ್ ರವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಇಂತಹ ಒಂದು ರಾಷ್ಟ್ರಧ್ವಜದ ಕಾರ್ಯಕ್ರಮದಲ್ಲಿ ಭಾಗವಹಿ ಸಲು ರಾಜ್ಯದ ಬೆರೆ ಬೆರೆ ಜಿಲ್ಲೆಗಳಿಂದ ಹಾಗೂ ಹೊರರಾಜ್ಯ ಗಳಿಂದ ರಾಷ್ಟ್ರಧ್ವಜ ಅಭಿಮಾನಿಗಳು ಪಾಲ್ಗೊಳ್ಳುವ ಸಂಭವವಿದೆ ಎಂದರು ಇಂತಹ ರಾಷ್ಟ್ರ ಧ್ವಜದ ಪ್ರೇಮವನ್ನು ಕಣ್ಣಾರೆ ನೋಡಲು ತಾಲೂಕಿನ ಜನತೆ ಕಾಯುತ್ತಿದ್ದಾರೆ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮಂಜುನಾಥ ಮುರಳ್ಳಿ,ಮುಖಂಡರಾದ ಎಸ್.ಆರ್ ಪಾಟೀಲ,ಲಿಂಗರೆಡ್ಡಿ ನಡಿಮನಿ,ನರೇಶ ಮಲೆನಾಡು,ಸೋಮಶೇಖರ್ ಬನ್ನೀರ್,ಹರೀಶ್ ಶಂಕರ ಮಠದ,ಆನಂದ ಕಲಾಲ್,ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಂತೋಷ ಲಾಡ್ ಅಭಿಮಾನಿಗಳು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





