Breaking News

ಸೀಟ್‌ ಬೆಲ್ಟ್ ಧರಿಸದ ಕಾರಣಕ್ಕೆ ಪೊಲೀಸರಿಂದ ಕಾರಿನ ಗಾಜು ಪುಡಿ ಪುಡಿ

ಕೋಲಾರ ಜಿಲ್ಲೆಯ ಮುಳಬಾಗಿಲು ಬಳಿ ಸೀಟ್‌ ಬೆಲ್ಟ್ ಧರಿಸದ ಕಾರಣ ಕಾರನ್ನು ತಡೆದ ವೇಳೆ ಚಾಲಕ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಕಾರಿನ ಚಕ್ರ ಕಾನ್‌ಸ್ಟೆಬಲ್ ಕಾಲಿನ ಮೇಲೆ ಹತ್ತಿಸಿದ ಆರೋಪದ ಹಿನ್ನೆಲೆ, ಆಕ್ರೋಶಗೊಂಡ ಕಾನ್‌ಸ್ಟೆಬಲ್ ಲಾಠಿಯಿಂದ ಕಾರಿನ ಎರಡೂ ಬದಿಯ ಗಾಜುಗಳನ್ನು ಪುಡಿ ಮಾಡಿದ್ದಾರೆ. ದಂಡ ಪಾವತಿಸುವ ವಿಚಾರದಲ್ಲಿ ಉಂಟಾದ ಗೊಂದಲದಿಂದ ಘಟನೆ ಮತ್ತಷ್ಟು ತೀವ್ರಗೊಂಡಿದ್ದು, ಕಾರು ಚಾಲಕ ನ್ಯಾಯ ಸಿಗುವವರೆಗೂ ವಾಹನವನ್ನು ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿದ್ದಾನೆ. ಇದರಿಂದ ಕೆಲಕಾಲ ವಾಹನ ದಟ್ಟಣೆ ಉಂಟಾಯಿತು.
ಬಳಿಕ ಪೊಲೀಸರು ಕಾರನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಹೆದ್ದಾರಿಗೆ ಅಡ್ಡಿಯಾಗಿ ವಾಹನ ನಿಲ್ಲಿಸಿ ಟ್ರಾಫಿಕ್‌ಗೆ ತೊಂದರೆ ಉಂಟುಮಾಡಿದ ಆರೋಪದಡಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *