ಹುಬ್ಬಳ್ಳಿ: ಶಹರ ಪೋಲಿಸ್ ಠಾಣಾ ವ್ಯಾಪ್ತಿಯ ಮರಾಠಾ ಗಲ್ಲಿ, ಮ್ಯಾದಾರ ಓಣಿ, ಕಲಾದಗಿ ಓಣಿ ಮತ್ತು ಸ್ಟೇಶನ ರಸ್ತೆಯ 8ಕ್ಕೂ ಹೆಚ್ಚು ಅಂಗಡಿಗಳ ಬೀಗಗಳನ್ನು ಮುರಿದು ನಗದು ಕಳುವು ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಶಹರ ಪೋಲಿಸ ಠಾಣೆಯಿಂದ ಕೂಗಳತೆಯಲ್ಲಿರುವ ಮರಾಠಾ ಗಲ್ಲಿಯ ರೇಣುಕಾ ಸ್ವೀಟ್ ಮಾರ್ಟ್ ನ ಶಟರ್ಸ್ ಬೀಗ ಮುರಿದು ನಗದು ಮತ್ತು ಒಂದು ಮೊಬೈಲ್ ಕದ್ದಿರುವ ಕಳ್ಳರು ಅಲ್ಲಿಯೇ ಎದುರಿನ ಮಿಶ್ರಾ ಪೇಡೆ ಅಂಗಡಿಯ ಬೀಗವನ್ನು ಮುರಿಯಲು ಪ್ರಯತ್ನಿಸಿದ್ದಾರೆ. ಅದಕ್ಕೂ ಪೂರ್ವದಲ್ಲಿ ಕಲಾದಗಿ ಓಣಿಯಲ್ಲಿ ಎರಡು ಇಲೆಕ್ಟ್ರಾನಿಕ್ಸ್ ಅಂಗಡಿಗಳ ಬೀಗವನ್ನು ಮುರಿದಿರುವ ಕಳ್ಳರು ಅಲ್ಲಿಯೂ ದೋಚುವ ಪ್ರಯತ್ನ ಮಾಡಿದ್ದಾರೆ. ನಂತರ ಮ್ಯಾದಾರ ಓಣಿಯ ಓಂ ಸ್ವಸ್ತಿಕ ಫ್ಯಾಷನ್, ಫೈನ್ ಕಲೆಕ್ಷನ್ ಅನ್ನುವ ಬಟ್ಟೆ ಅಂಗಡಿಗಳ ಶಟರ್ಸ ಮುರಿದು ಓಂ ಸ್ವಸ್ತಿಕ ಫ್ಯಾಷನ್ ನಲ್ಲಿಂದ 25 ಸಾವಿರ ರೂ ಮತ್ತು ಫೈನ್ ಕಲೆಕ್ಷನ್ ನಲ್ಲಿದ್ದ 15 ಸಾವಿರ ನಗದು ಕಳುವು ಮಾಡಿ ಪರಾರಿ ಆಗಿರುವ ದೃಶ್ಯಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಅದೇ ರೀತಿ ಸ್ಟೇಷನ ರಸ್ತೆ ಬಿಗ್ ಮಿಶ್ರಾ ಪೇಡೆ ಅಂಗಡಿಯ ಶಟರ್ಸ್ ಮುರಿದು ಅಂಗಡಿಯಲ್ಲಿಟ್ಟ 30 ಸಾವಿರ ಹಣವನ್ನು ಕದ್ದಿದ್ದಾರೆ. ಇವೆಲ್ಲ ಅಂಗಡಿಗಳು ಮುಖ್ಯ ರಸ್ತೆಯಲ್ಲಿಯೇ ಇದ್ದು ರಾತ್ರಿ 1 ಘಂಟೆಯಿಂದ ಬೆಳಗಿನ ಜಾವ 4 ಘಂಟೆಯ ಅವಧಿಯಲ್ಲಿ ಜರುಗಿದ್ದು, ಮೂರು ಜನರು ಕಳುವು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಪೋಲೀಸರು ತನಿಖೆ ಮಾಡುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





