ಪಟ್ನಾ: ಬಿಹಾರದ ನೂತನ ಸಿಎಂ ನಿತೀಶ್ ಕುಮಾರ್‌ರ ಸರಕಾರದ ಸಚಿವ ಸಂಪುಟ ರಚನೆ ಆ. 16ರಂದು ನಡೆಯುವ ಸಂಭವವಿದೆ.
ಜನತಾದಳ (ಯು) ವಿನ ಪ್ರಮುಖ ಮುಖಂಡರೊಬ್ಬರು ಆಂಗ್ಲ ಮಾಧ್ಯಮ ವೊಂದಕ್ಕೆ ತಿಳಿಸಿರುವಂತೆ, ಮೈತ್ರಿ ಪಕ್ಷಗಳ ಜತೆಗೂ ಚರ್ಚಿಸಿ ನಿತೀಶ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಮಂಗಳವಾರ ಸಚಿವ ಸಂಪುಟ ರಚನೆಯಾಗಲಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಯಿಂದ ಮೈತ್ರಿ ಕಡಿದುಕೊಳ್ಳುವ ಮೂಲಕ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಆರ್‌ಜೆಡಿ ಜತೆಗೆ ಕೈ ಜೋಡಿಸಿ ಹೊಸ ಸರಕಾರ ಇತ್ತೀಚೆಗಷ್ಟೇ ನಿತೀಶ್ ರಚಿಸಿದ್ದರು. ನಿತೀಶ್‌ರೊಂದಿಗೆ ಆರ್‌ಜೆಡಿಯ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

