Breaking News

ವಿದಿ ಆಟಕ್ಕೆ ಬಲಿಯಾದ ಪೊಲೀಸ್​ ಕಾನ್ಸ್​ಟೇಬಲ್​ ಕುಟುಂಬ

ಬೀದರ್: ಕಂಟೇನರ್‌ ಲಾರಿಗೆ ಎರ್ಟಿಗಾ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಭಂಗೂರ ಬಳಿ‌ ನಡೆದಿದೆ.

ಘಟನೆಯಲ್ಲಿ ಹೈದರಾಬಾದ್​ನ ಬೇಗಂಪೇಟ್ ಮೂಲದ ಪೊಲೀಸ್​ ಕಾನ್ಸ್​ಟೇಬಲ್​ ಗಿರಿಧರ್ ಕುಟುಂಬದ ನಾಲ್ವರು ಮತ್ತು ಕಾರು ಚಾಲಕ ಸೇರಿ ಐವರು ಅಸುನೀಗಿದ್ದಾರೆ. ಪೊಲೀಸ್​ ಕಾನ್ಸ್​ಟೇಬಲ್​ ಗಿರಿಧರ್ (45), ಪತ್ನಿ ಅನಿತಾ (36), ಮಗಳು ಪ್ರೀತಿ (14), ಮಗ ಮಯಂಕ್ (02) ಹಾಗೂ ಕಾರು ಚಾಲಕ ದಿನೇಶ್ (35) ಮೃತಪಟ್ಟವರೆಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದವರು ಹೈದರಾಬಾದ್​ನಿಂದ ಕಲಬುರಗಿಯ ಗಾಣಗಾಪುರದ ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *