Breaking News

ಆಲ್ ದಿ ಬೆಸ್ಟ್ ಇಂಡಿಯಾ

ರಾಮನಗರ: ಇಂದು ವಿಶ್ವಾದ್ಯಂತಕ್ರಿಕೆಟ್ ಜ್ವರ ಹಬ್ಬಿಸಿರುವ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಟೀಂ ಇಂಡಿಯಾಗೆ ನಾಲ್ಕನೇ ಭಾರಿ ಫೈನಲ್ ಗೇರುವ ಹಂಬಲದಲ್ಲಿದೆ. ಕ್ರಿಕೆಟ್ ಅಭಿಮಾನಿಗಳನ್ನ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿರುವ ಎರಡು ತಂಡಗಳ ನಡುವಿನ ಕದನಕ್ಕೆ ಓಲ್ಡ್ ಟ್ರಾಫರ್ಡ್ ಮೈದಾನ ಸಜ್ಜಾಗಿದೆ. ಟೀಂ‌ ಇಂಡಿಯಾ ಗೆದ್ದುಬರಲಿ ಎಂದು ರೇಷ್ಮೆನಗರಿ ರಾಮನಗರ ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳು ಹಾರೈಸಿದ್ದಾರೆ. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ತರಬೇತಿ ಪಡೆಯುತ್ತಿರುವ ಜೂನಿಯರ್ ಕ್ರಿಕೆಟರ್ಸ್ ಭಾರತ ಈ ಭಾರಿಯ ಪಂದ್ಯದಲ್ಲಿ ಗೆದ್ದು ಫೈನಲ್ ತಲುಪುವುದರಲ್ಲಿ ಅನುಮಾನವೇ ಇಲ್ಲ. ಹಾಗೇ ಈ ಭಾರಿ ಕಪ್ ನಮ್ಮದೇ ಎಂದು ವಿಶ್ವಾಸ ಹೊರಹಾಕಿದ್ದಾರೆ. ಇನ್ನು ಭಾರತದ ಪಟ ಇಟ್ಟುಕೊಂಡು ಭಾರತ ಮಾತ ಕೀ ಜೈ ಎಂದು ಘೋಷಣೆ ಕೂಗಿ ಟೀ ಇಂಡಿಯಾಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *