Breaking News

ಬೀದಿ ಬೀದಿಯಲ್ಲಿ ಡಿಂಡಿಮ ಬಾರಿಸಿದ ನಾಸಿಕ್ ಡೊಳ್ಳು: ಯುವಶಕ್ತಿಯಿಂದ ಬೃಹತ್ ರಾಯಣ್ಣ ಯಾತ್ರೆ

ಹುಬ್ಬಳ್ಳಿ:ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವ ಸಂಭ್ರಮದೊಂದಿಗೆ 76ನೆ ಸ್ವಾತಂತ್ರ್ಯ ಉತ್ಸವದ ಸಂಭ್ರಮದಲ್ಲಿದ್ದ ಹುಬ್ಬಳ್ಳಿ ಜನತೆಗೆ ರಾಯಣ್ಣ ಜಯಂತಿಯ ಸಂಭ್ರಮ ಕೂಡ ಹುಬ್ಬಳ್ಳಿಯಲ್ಲಿ ಕಳೆಗಟ್ಟಿದೆ.

ಹೌದು ಇಂದು ಸಂಜೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಶಕ್ತಿ ವತಿಯಿಂದ ಯಲ್ಲಾಪುರ ಓಣಿ, ಪಾಟೀಲ್ ಗಲ್ಲಿ, ದೇಸಾಯಿ ಓಣಿಯ ರಾಯಣ್ಣ ಅನುಯಾಯಿಗಳು ನಾಸಿಕ್ ಡೊಳ್ಳಿನ ಮೆರವಣಿಗೆಯನ್ನ ಸುಮಾರು 5 ಕಿಲೋಮೀಟರ್ ವರೆಗೂ ನಡೆಸಿದರು.

ಬಂಕಾಪುರ ಚೌಕ್ ನಿಂದ ಶುರುವಾದ ಡೊಳ್ಳಿನ ನಾದದ ಮೆರವಣಿಗೆ ದುರ್ಗದಬೈಲ್ ಮೂಲಕ ಸಂಗೊಳ್ಳಿ ರಾಯಣ್ಣನ ಮೂರ್ತಿವರೆಗೂ ಜರುಗಿತು ,ಈ ವೇಳೆ ಯುವಕ ಯುವತಿಯರ ಡೊಳ್ಳಿನ ನಾದಕ್ಕೆ ಜನರು ಮನಸೋತು ಹೋದರು
ಈ ವೇಳೆ ಮಾತನಾಡಿದ ಸಂಜೀವಗೌಡ ಪಾಟೀಲ DJ ,ಅಥವಾ ಇನ್ನಿತರೆ ಮನರಂಜನೆ ಮಾಡುವ ಬದಲು ಸಾಂಸ್ಕೃತಿಕ ನಾಸಿಕ್ ಡೊಳ್ಳು ತರಸಲಾಗಿದ್ದು ನಮ್ಮ ಸಂಸ್ಕೃತಿಯನ್ನ ನಾವು ಎಲ್ಲಾ ದಿನಗಳಲ್ಲಿ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *