Breaking News

ಹುಬ್ಬಳ್ಳಿ ಇಸ್ಕಾನ್ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಹುಬ್ಬಳ್ಳಿ: ನಗರದ ಇಸ್ಕಾನ್ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದೆ. ಸಹಸ್ರಾರು ಭಕ್ತರಿಂದ ಶ್ರೀಕೃಷ್ಣ ನ ದರ್ಶನ ಪಡೆದರು. ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ವಿಶೇಷವಾಗಿ ಶ್ರೀಕೃಷ್ಣ ಮೂರ್ತಿ ಅಲಂಕಾರ ಮಾಡಲಾಗಿತ್ತು.

ಹೂವು ಮತ್ತು ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಶ್ರೀಕೃಷ್ಣ ನಿಗೆ 110 ಕೆ.ಜಿ ತೂಕದ ಬೃಹತ್ ಗಾತ್ರದ ಲಡ್ಡು ನೈವೇದ್ಯವಾಗಿ ಅರ್ಪಿಸಲಾಗಿತ್ತು. ಜೊತೆಗೆ 108 ವೈವಿಧ್ಯ ಭಕ್ಷ್ಯಗಳನ್ನಿಟ್ಟು ಪೂಜೆ ಮಾಡಲಾಯಿತು. ತೊಟ್ಟಿಲೋತ್ಸವ ನಡೆಸಿ ಭಕ್ತರು ಸಂಭ್ರಮಿಸಿದರು. ಕೃಷ್ಣ ನಿಗೆ ಇಷ್ಟವಾದ ಗೀತೆಗಳ ಗಾಯನ ನಡೆಯಿತು. ಜನತೆ ಭಕ್ತಿ ಸಮರ್ಪಿಸಿ ಇಷ್ಟಾರ್ಥಸಿದ್ಧಿಗೆ ಪ್ರಾರ್ಥನೆ ಮಾಡಿದರು. ರಾತ್ರಿ 9.30 ರಿಂದ 12 ಗಂಟೆವರೆಗೆ ಮಹಾ ಮಂಗಳಾರತಿ ನಡೆಯಲಿದೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *