ಗುತ್ತಿಗೆದಾರರೊಬ್ಬರ ಬಾಕಿ ಬಿಲ್ ಬಿಡುಗಡೆಗೆ ₹ 35 ಸಾವಿರ ಫೋನ್ ಪೇ ಮೂಲಕ ಲಂಚ ಪಡೆದ ಆರೋಪದಡಿ ಕೃಷ್ಣ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಎಇಇ ಹಾಗೂ ಜೆಇಯನ್ನು ಲೋಕಾಯುಕ್ತ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಶಹಾಪುರ ಕೆಬಿಜೆಎನ್‌ಎಲ್ ಕಚೇರಿಯ ಎಇಇ ಮಧುಸೂದನ ಹಾಗೂ ಜೆಇ ಮಂಜುನಾಥ ಲಂಚ ಪಡೆದ ಆರೋಪಿಗಳು. ವಡಗೇರಾ ತಾಲ್ಲೂಕಿನ ಗಡ್ಡೆಸೂಗುರು ಗ್ರಾಮದ ಕಾಸಿಂಸಾಬ್ ಜಲಾಲ್‌ಸಾಬ್ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಗುತ್ತಿಗೆದಾರ ಜಲಾಲ್‌ಸಾಬ್ ಅವರ ಬಾಕಿ ಬಿಲ್ ಬಿಡುಗಡೆ ಮಾಡಿಕೊಡಲು ಆರೋಪಿಗಳು ₹ 35 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುರುವಾರ ಶಹಾಪುರ ಕಚೇರಿಯಲ್ಲಿ ಮಧುಸೂದನ ₹ 35 ಸಾವಿರ ಲಂಚದ ಹಣವನ್ನು ಫೋನ್ ಪೇ ಮೂಲಕ ಸ್ವೀಕರಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ಡಿವೈಎಸ್‌ಪಿ ಜೆ.ಎಚ್. ಇನಾಮದಾರ್, ಇನ್‌ಸ್ಪೆಕ್ಟರ್ ಸಿದ್ದರಾಯ ಬಳ್ಳೂರಗಿ ಅವರಿದ್ದ ತಂಡವು ದಾಳಿ ಮಾಡಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

