ಉಡುಪಿ: ಎರಡು ವರ್ಷಗಳಿಂದ ಎಲ್ಲ ಹಬ್ಬಗಳ ಸಂಭ್ರಮಕ್ಕೆ ಸರಕಾರದ ಕೋವಿಡ್ ಮಾರ್ಗ ಸೂಚಿ ಕಡಿವಾಣ ಹಾಕಿದ್ದರೆ, ಈ ಬಾರಿ ಶ್ರೀಕೃಷ್ಣಾಷ್ಟಮಿ, ವಿಟ್ಲಪಿಂಡಿ ಉತ್ಸವವು ಜನಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆಯಿತು.
ಊರ, ಪರ ಊರಿನ ಸಾವಿರಾರು ಮಂದಿ ಭಕ್ತರು ಕೃಷ್ಣಾ… ಕೃಷ್ಣಾ.. ಎಂದು ಕೃಷ್ಣಲೀಲೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ರಥಬೀದಿಯಲ್ಲಿ ಶನಿವಾರ ಸಂಜೆ ಸಾವಿರಾರು ಭಕ್ತ ಸಾಗರದ ನಡುವೆ ವೈಭವದಿಂದ ವಿಟ್ಲಪಿಂಡಿ ಉತ್ಸವ ಸಂಪನ್ನಗೊಂಡಿತು. ಬಿಸಿಲು ಮೋಡದ ವಾತಾವರಣದ ನಡುವೆ ಸುಮಾರು 4 ಗಂಟೆ ಹೊತ್ತಿಗೆ ಕೆಲ ಕಾಲ ವರುಣಾಗಮನವಾಯಿತು. ಹೀಗಾಗಿ ಹಲವರು ಕೊಡೆಗಳ ರಕ್ಷಣೆ ಪಡೆದರು.
ಶುಕ್ರವಾರ ಏಕಾದಶಿಯಂತೆ ನಿರ್ಜಲ ಉಪವಾಸದ ವ್ರತಾಚರಣೆ ಮಾಡಿದ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮತ್ತು ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಶನಿವಾರ ಮುಂಜಾವ ಪೂಜೆಗಳನ್ನು ನಡೆಸಿದರು. ಮುಖ್ಯಪ್ರಾಣ ದೇವರಿಗೆ ಉಂಡೆ ಚಕ್ಕುಲಿಗಳನ್ನು ಸಮರ್ಪಣೆ ಮಾಡಿದ ಬಳಿಕ ಶ್ರೀಕೃಷ್ಣ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

