Breaking News

ಹುಬ್ಬಳ್ಳಿ: ನಾಪತ್ತೆಯಾಗಿದ್ದ ಟ್ರಕ್ ಪೊಲೀಸರ ವಶಕ್ಕೆ; ಕಳ್ಳರ ಬಂಧನ..

ಹುಬ್ಬಳ್ಳಿ: ಅವಳಿ ನಗರದಲ್ಲಿ ಕಳ್ಳತನ ಪ್ರಕಣಗಳು ಸೇರಿದಂತೆ ಒಂದಿಲ್ಲಾ ಒಂದು ಘಟನೆಗಳು ಸದ್ದು ಮಾಡುತ್ತಿರುತ್ತವೆ, ಹುಬ್ಬಳ್ಳಿಯ ಕಾರವಾರ ರೋಡ್ ಬ್ರಿಡ್ಜ್ ನಿಂದ ನಾಪತ್ತೆಯಾಗಿದ್ದ ಟ್ರಕ್ ಕೊನೆಗೂ ಪೊಲೀಸರ ಕೈಯಲ್ಲಿ ಸಿಕ್ಕಿದೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಲಿ ಶೇಕ್, ಪಿಎಸ್‌ಐ ವಿಶ್ವನಾಥ, ಪಿಎಸ್‌ಐ ಸಾತನಹಳ್ಳಿ ಮತ್ತು ಅವರ ತಂಡದ ನೇತೃತ್ವದಲ್ಲಿ ನಾಪತ್ತೆಯಾಗಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ನಡೆಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಭಾಗಿಯಾದ ಕಳ್ಳನ ಬಗ್ಗೆ ಕೇಳಿದರೆ ವಿಚಿತ್ರ ಅನ್ನಿಸುತ್ತೆ ಆದರೆ ಅದು ಸತ್ಯ.. ಹೌದು ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವ ಅಪ್ರಾಪ್ತ ಬಾಲಕ. ಇನ್ನು ಈ ಅಪ್ರಾಪ್ತ ಬಾಲಕ ಬ್ರಿಡ್ಜ್ ಬಳಿಯಿರುವ ಲಾರಿಯನ್ನು ಕದ್ದುಕೊಂಡು ಹೋಗುವಾಗ ಅಲ್ಲಿರುವ ಜನ ಜೀವ ಅಂಗೈಯಲ್ಲಿ ಇಟ್ಟುಕೊಂಡು ಪರದಾಡುತ್ತಿದ್ದರು ಆಗ ಬಾಲಕ ಕಳ್ಳ ಸಿಕ್ಕಿಬಿದ್ದಿದ್ದಾನೆ. ಮತ್ತೊಬ್ಬ ವ್ಯಕ್ತಿ ಬಾಲಕನಿಗೆ ಕಳ್ಳತನ ಮಾಡಲು ಹೇಳಿದ್ದ, ಈಗ ಇವರಿಬ್ಬರು ಪೊಲೀಸರ ವಶದಲ್ಲಿದ್ದಾರೆ.

Share News

About Shaikh BigTv

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *