Breaking News

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಜೋಶಿ

ಹುಬ್ಬಳ್ಳಿ: ವಕ್ಷ ಬೋರ್ಡ್‌ ನವರು ಮುಂಬರುವ ಅಧಿಕಾರ ಕಡಿಮೆ ಆಗುತ್ತೆ ಅನ್ನೋ ಭಯದಿಂದ, ಇರುವ ಆಸ್ತಿಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಕ್ರಿಮಿನಲ್‌ ತರಾತುರಿಯಲ್ಲಿದ್ದಾರೆ. ಬಿಜೆಪಿಯ ಗಟ್ಟಿ ಹೇಳಿಕೆ ಬರದೇ ಹೋಗಿದ್ರೆ, ಉಪಚುನಾವಣೆ ಇರದೇ ಹೋಗಿದ್ರೆ, ರಾಜ್ಯ ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಈಗ ಹಿಂದೆ ತೆಗೆದುಕೊಳ್ಳುತ್ತೇವೆ ಅಂತ ಹೇಳ್ತಿದ್ದಾರೆ. ಕೊಡಲಿಕೆ ಇವರ್ಯಾರು? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಾರವಾಗಿ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40-50 ವರ್ಷಗಳಿಂದ ಉಳಿಮೆ ಮಾಡುವ ರೈತರಿಗೆ ನೋಟಿಸ್‌ ಕೊಟ್ಟಿದ್ದಾರೆ. ಇವರಪ್ಪನ ಮನೆ ಆಸ್ತಿನಾ ನೋಟಿಸ್‌ ಕೊಡೋಕೆ..? ಹೇಳೋರು ಕೇಳೋರು ಯಾರು ಇಲ್ಲ ಅಡ್ಕೊಂಡಿದ್ದಾರಾ..? ಯಾವ ಪ್ರಮಾಣದಲ್ಲಿ ಮುಸ್ಲಿಂ ಮತಾಂದ ತುಷ್ಟಿಕರಣ ಮಾಡಲಾಗುತ್ತಿದೆ ಅಂತ ಇದರಿಂದ ಸ್ಪಷ್ಟ ಆಗ್ತಿದೆ.

ದೇವಸ್ಥಾನಕ್ಕೂ ನೋಟೀಸ್ ಕೊಟ್ಟಿದ್ದಾರೆ, ಇವರ್ಯಾರು ಕೊಡೋಕೆ..?2013ರ ಒಳಗೆ ಅನೇಕರ ವಿರೋಧದ ನಡುವೆ ವಕ್ಷ ಕಮಿಟಿಗೆ ಅಪರಮಿತ ಅಧಿಕಾರ ಕೊಟ್ಟಿದ್ದಾರೆ ಎಂದು ಜೋಶಿ ಕಿಡಿಕಾರಿದರು.

Share News

About Shaikh BigTv

Check Also

ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷ ಜೈಲು!

ರಾಮನಗರ: ವಿಶೇಷಚೇತನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಇಬ್ಬರು ಆರೋಪಿಗಳಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ 1ನೇ ಅಪರ …

Leave a Reply

Your email address will not be published. Required fields are marked *