Breaking News

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೆಚ್ಚಿದ ಕಾವು

ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಗಣೆಶೋತ್ಸವ ಆಚರಣೆಗೆ ಗಡುವು ವಿಚಾರ, ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆಗಳ ತೀವ್ರ ಸ್ವರೂಪದ ಹೋರಾಟ ಆರಂಭವಾಗಿದೆ. ಕೂಡಲೇ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಗಳು ಹೆಚ್ಚುತ್ತಿವೆ. ಇದೇ ವೇಳೆ ಮಾತನಾಡಿದ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್

ಗಣೇಶೋತ್ಸವ ಆಚರಣೆಗೆ ಸರ್ಕಾರ ಹಾಗೂ ಪಾಲಿಕೆ ಮೀನಾ ಮೇಷ ಎಣಿಸುತ್ತಿದೆ. ಈದ್ಗಾ ಮೈದಾನವೇನೂ ನಿಮ್ಮಪ್ಪನ ಸ್ವತ್ತಲ್ಲ. ಈದ್ಗಾ ಮೈದಾನ ಸಾರ್ವಜನಿಕ ಸ್ವತ್ತು. ಅಲ್ಲಿ ಮುಸ್ಲಿಂ ಪ್ರಾರ್ಥನೆಗೆ ಅವಕಾಶ ನೀಡ್ತಾರೆ. ಆದ್ರೆ ಗಣೆಶೋತ್ಸವ ಆಚರಣೆಗೆ ಯಾಕೆ ಅವಕಾಶ ನೀಡ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನುಮತಿ ಕೊಟ್ಟರೂ ಸರಿ ಕೊಡದಿದ್ದರೂ ಸರಿ ಗಣೆಶೋತ್ಸವ ಆಚರಣೆ ಮಾಡೇ ಮಾಡ್ತೀವಿ. ಪಾಲಿಕೆಗೆ ಇದು ಕೊನೆಯ ಗಡವು, ಈ ಗಡುವು ಮೀರಿದ್ರೆ ನಾವು ಗಣೇಶ ಆಚರಣೆ ಮಾಡೇ ಮಾಡ್ತೀವಿ ಎಂದು ಕಿಡಿ ಕಾರಿದರು.

ಸಾವಿರಾರು ಕಾರ್ಯಕರ್ತರ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸುತ್ತೇವೆ. ತಾಕತ್ ಇದ್ರೆ ಅದೇನ್ ಮಾಡ್ಕೋತಿರೋ ನಾವು ನೋಡ್ತೀವಿ ಎಂದು ಎಚ್ಚರಿಕೆ ನೀಡಿದರು. ಪಾಲಿಕೆ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಪ್ರಮೋದ್ ಮುತಾಲಿಕ್.

ಗಣೇಶ ಪ್ರತಿಷ್ಠಾಪನೆ ಅವಕಾಶ ಕೊಡಬೇಕು, ಅವಕಾಶ ಕೊಡದೆ ಇದ್ದರೆ ಇದೇ 26 ರಂದು ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ಮಾಡುತ್ತೆವೆ. ಈ ಕುರಿತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತುಟಿ ಬಿಚ್ಚಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *