Breaking News

ಸಾರಿಗೆ ಬಸ್‌ಗೆ ಬೈಕ್ ಡಿಕ್ಕಿ, ಹಿಂಬದಿ ಸವಾರ ಸ್ಥಳದಲ್ಲಿ ಸಾವು

ಗದಗ : ಸಾರಿಗೆ ಸಂಸ್ಥೆಯ ಬಸ್‌ಗೆ ಬೈಕ್ ಗುದ್ದಿದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗದಗ ನಗರದ ಹೊಂಬಳ ರಸ್ತೆಯಲ್ಲಿ ನಡೆದಿದೆ . ಇನ್ನು ಅಪಘಾತ ತಪ್ಪಿಸಲು ಹೋದ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು , 10 ಕ್ಕೂ ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ . ಅಪಘಾತದಲ್ಲಿ ಮೃತಪಟ್ಟ ಹಿಂಬದಿ ಸವಾರನ ಮೃತ ದೇಹದ ತಲೆ ಭಾಗವು ಛಿದ್ರವಾಗಿರುವುದು ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ.

ಲಿಂಗದಾಳ ಗ್ರಾಮದ ಹನುಮಂತ ಎಂಬಾತ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ . ಹೊಂಬಳ ಕಡೆಯಿಂದ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ವಾಹನವೊಂದನ್ನು ಓವರ್‌ಟೇಕ್ ಮಾಡಲು ಹೋದಾಗ ಗದಗ ಕಡೆಯಿಂದ ಹೊರಟಿದ್ದ ಬಸ್‌ಗೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ .

ಒಮ್ಮೆಲೆ ಎದುರಿಗೆ ಬಂದ್ ಬೈಕ್‌ನ ಅಪಘಾತ ತಪ್ಪಿಸಲು ಸಾರಿಗೆ ಸಂಸ್ಥೆ ಚಾಲಕ ಮುಂದಾಗಿದ್ದಾನೆ . ಈ ವೇಳೆ ಅತೀ ವೇಗದಿಂದ ಬರುತ್ತಿದ್ದ ಬೈಕ್ ಬಸ್‌ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಸವಾರ ಹನುಮಂತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ . ಅಪಘಾತದ ರಭಸಕ್ಕೆ ಮೃತನ ತಲೆ ಛಿದ್ರವಾಗಿದೆ . ಇನ್ನು ಬಸ್ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಸಾರಿಗೆ ಬಸ್ ಸಹ ಪಲ್ಟಿಯಾಗಿದೆ . ಬಸ್‌ನಲ್ಲಿದ್ದು ೧೦ ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು , ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ . ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ .

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *