Breaking News

ಪ್ರೀತಿಯ ನಾಟಕವಾಡಿ ಅಪ್ರಾಪ್ತಿ ಮೇಲೆ ಅತ್ಯಾಚಾರ


ಹುಬ್ಬಳ್ಳಿ : ಪ್ರೀತಿಯ ನಾಟಕವಾಡಿ ಅಪ್ರಾಪ್ತಿಯನ್ನು ಲಾಡಜ್ಜ ಕರೆದೊಯ್ದು ಅತ್ಯಾಚಾರ ನಡೆಸಿರುವ ಕುರಿತು ಕಾರವಾರದ ಶ್ರೀನಿಧಿ ಅಲಿಯಾಸ್ ಓಂಕಾರ ಕೊಟ್ಟೇಕರ ಎಂಬಾತನ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

17 ವರ್ಷದ ಅಪ್ರಾಪ್ತಿಯ ಜೊತೆ ಶ್ರೀನಿಧಿ ಪ್ರೀತಿಯ ನಾಟಕವಾಡಿ ಸಲುಗೆ ಬೆಳೆಸಿಕೊಂಡಿದ್ದ . ಪುಸಲಾಯಿಸಿ ಆಕೆ ಜತೆಗೆ ಅಲಿಂಗನದ ಫೋಟೋ ತೆಗೆದುಕೊಂಡಿದ್ದ .ಈ ಫೋಟೋ ತೋರಿಸಿ ಆಕೆಗೆ ಬೆದರಿಸಿ 2021 ರ ನವೆಂಬರ್‌ನಿಂದ 2022 ರ ಫೆಬ್ರವರಿ ನಡುವೆ ಅಕ್ಷಯ ಪಾರ್ಕ್ ಬಳಿಯ ಲಾಡ್ಡವೊಂದಕ್ಕೆ ಐದಾರು ಸಲ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ .

ಈ ಬಗ್ಗೆ ಯಾರಿಗಾದರೂ ಹೇಳಿದರೆ ಹಗ್ ಮಾಡಿದ ಫೋಟೋ ಎಲ್ಲರಿಗೂ ಕಳುಹಿಸುತ್ತೇನೆ ಎಂದು ಬೆದರಿಸಿದ್ದಾನೆ . ಅಲ್ಲದೆ , ಆಕೆಯ ಪಾಲಕರಿಗೂ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಯುವತಿಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ . ಇನ್ನೂ ಗೋಕುಲ ರೋಡ್ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ ಕಾಲಿಮಿರ್ಚಿ ನೇತೃತ್ವದ ತಂಡ ಕಾರವಾರದಲ್ಲಿ ಆರೋಪಿ ಶ್ರೀನಿಧಿ ಕೊಲ್ವೇಕರ ( 21 ) ಎಂಬಾತನನ್ನು ಬಂಧಿಸಿ , ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *