ಮೈಸೂರು: ಅರಮನೆಯಲ್ಲಿ ನಡೆಯುವ ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗಳು ನಡೆಯುತ್ತಿವೆ.
ದಸರಾ ಗಜಪಯಣಕ್ಕೂ ತಯಾರಿಗಳು ನಡೆಯುತ್ತಿದ್ದು, ಆಗಸ್ಟ್ 7ರಂದು ಗಜಪಡೆ ಮೈಸೂರಿಗೆ ಆಗಮಿಸಲಿದೆ. ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಆಗಮಿಸುತ್ತವೆ. ಬಳಿಕ ಎರಡನೇ ಹಂತದಲ್ಲಿ 5 ಅಥವಾ 6 ಆನೆಗಳು ಆಗಮಿಸುತ್ತವೆ. ಸದ್ಯ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದ್ದು, ಈ ಬಾರಿ ಹೊಸ ಆನೆಗಳಾದ ಗಣೇಶ, ಭೀಮ, ಸುಗ್ರೀವಾ, ಅಜಯ, ಮಹೇಂದ್ರ ಬರುವ ಸಾಧ್ಯತೆಯಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





