Breaking News

ರಾಣಿ ಚೆನ್ನಮ್ಮ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿಗೆ ಒತ್ತಾಯ- ಸದನ ಸಮಿತಿಗೆ ಮುತಾಲಿಕ್ ಭೇಟಿ

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲು ರಾಣಿ ಚೆನ್ನಮ್ಮ ಗಣೇಶೋತ್ಸವ ಸಮಿತಿ ಹಾಗೂ
ಶ್ರೀರಾಮ ಸೇನಾ ವತಿಯಿಂದ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿಗೆ ಒತ್ತಾಯ- ಸದನ ಸಮಿತಿಗೆ ಮುತಾಲಿಕ್ ಭೇಟಿ ಮಾಡಿ ಒತ್ತಾಯ ಮಾಡಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರೆಲ್ಲರೂ ‘ಶಾಂತಿ ಮತ್ತು ಸೌಹಾರ್ದ’ದ ಮಂತ್ರ ಜಪಿಸಿದ ಬೆನ್ನಲ್ಲೇ ಪ್ರಮೋದ್ ಮುತಾಲಿಕ್ ಅವರು, ಸದನ ಸಮಿತಿ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಹಾಗೂ‌ ಆಯುಕ್ತರನ್ನ ಬೇಟಿಯಾಗಿದ್ದು ಗಮನ ಸೆಳೆದಿದೆ‌.

ವಿಷಯದ ಬಗ್ಗೆ ತೀರ್ಮಾನಕ್ಕಾಗಿ ಸರ್ವಪಕ್ಷಗಳ ಐವರು ಸದಸ್ಯರ ಸದನ ಸಮಿತಿಯನ್ನು ಮೇಯರ್ ಈರೇಶ ಅಂಚಟಗೇರಿ ರಚಿಸಿ ನಿನ್ನೆ ಆದೇಶ ನೀಡಿದ್ದಾರೆ. ಸಮಿತಿಯಲ್ಲಿ ಆಡಳಿತ ಪಕ್ಷದ ಮೂವರು ಮತ್ತು ವಿರೋಧ ಪಕ್ಷದ ಇಬ್ಬರು ಸದಸ್ಯರನ್ನು ಒಳಗೊಂಡಿದ್ದರ ಬಗ್ಗೆ ಪ್ರಮೋದ್ ಮುತಾಲಿಕ್ ಮಾಹಿತಿ ಪಡೆದುಕೊಂಡರು. ಹುಬ್ಬಳ್ಳಿ ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆಗ ಅನುಮತಿ ನೀಡುವಂತೆ ಒತ್ತಾಯಿಸಿ ರಾಣಿ ಚನ್ನಮ್ಮ (ಈದ್ಗಾ) ಮೈದಾನ ಗಜಾನನ ಉತ್ಸವ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದ್ದ ನಂತರ ಈಗ ಇನ್ನೊಂದು ಹೋರಾಟಕ್ಕೆ ಹಿಂದು ಪರ ಸಂಘಟನೆಗಳು ಸಜ್ಜಾಗಿವೆ. ಬಜರಂಗದಳ, ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್‌, ಹಿಂದೂ ಜಾಗರಣ ವೇದಿಕೆ ಮತ್ತು ರಾಣಿ ಚನ್ನಮ್ಮ (ಈದ್ಗಾ) ಮೈದಾನ ಗಜಾನನ ಉತ್ಸವ ಸಮಿತಿ ಸದಸ್ಯರು
ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ನೇತೃತ್ವದಲ್ಲಿ ಇಂದು ಮುಂದಿನ ಹೋರಾಟದ ಸಾದಕ ಭಾದಕ ಕುರಿತು ಸಹ ಚರ್ಚೆ ಮಾಡಿದರು. ಆರು ವರ್ಷಗಳಿಂದ ಅನುಮತಿಗೆ ಒತ್ತಾಯ ಮಾಡಿದ್ದು ಈ ವರ್ಷ ಅನುಮತಿ ನೀಡದಿದ್ದರೂ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತೇವೆ. ಇದು ನಮ್ಮ ಹಕ್ಕು. ಇದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಮುಸ್ಲಿಮರು ವಿರೋಧ ಮಾಡಿದರೆ ಅವರಿಗೆ ಅಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೊಡುವುದಿಲ್ಲ’ ಎಂದರು.

‘ಈದ್ಗಾ ಮೈದಾನದಲ್ಲಿ ಮುಸ್ಲಿಮರಿಗೆ ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗಿದೆ. ಅದೇ ರೀತಿ ಸಾರ್ವಜನಿಕ ಗಣೇಶೋತ್ಸವಕ್ಕೂ ಅನುಮತಿ ನೀಡಬೇಕು. ಶಾಂತಿ, ಸೌಹಾರ್ದ, ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ ಮಾಡುತ್ತೇವೆ. ಈ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಗಣೇಶೋತ್ಸವಕ್ಕೆ ಅನುಮತಿ ನೀಡದಿದ್ದರೆ ಸಹ ಹೋರಾಟ ಅನಿವಾರ್ಯ. ಇನ್ನು ಇಂದಿನ ಶಾಸಕ ಜಗದೀಶ ಶೆಟ್ಟರ್‌ ಅವರ ನಿವಾಸದ ಎದುರು ಪ್ರತಿಭಟನೆಯನ್ನು ವಾಪಾಸ್ ಪಡೆಯಲಾಗಿದೆ. ಕಾರಣ ಗಣೇಶ ಚತುರ್ಥಿ ಆಚರಣೆಗೆ ಸದನ ಸಮಿತಿ ರಚನೆಯ ಹಿನ್ನೆಲೆಯಲ್ಲಿ ಈ ಹೋರಾಟ ಸಹ ಕೈ ಬಿಡಲಾಗಿದೆ‌. ಇನ್ನು ಇದೇ ವೇಳೆ ಜನಪ್ರತಿನಿಧಿಗಳು ನಾಗರಿಕರ ಬೇಡಿಕೆಗಳಿಗೆ ಸ್ಪಂದಿಸಬೇಕು. ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು. ರಾಣಿ ಚನ್ನಮ್ಮ (ಈದ್ಗಾ) ಮೈದಾನ ಗಜಾನನ ಉತ್ಸವ ಸಮಿತಿ ಸಂಚಾಲಕ ಹನಮಂತಸಾ ನಿರಂಜನ ಮಾತನಾಡಿ, ಗಣೇಶೋತ್ಸವಕ್ಕೆ ಅನುಮತಿ ಕೋರಿ ಈಗಾಗಲೇ ಎರಡು ಬಾರಿ ಗಡುವು ನೀಡಲಾಗಿತ್ತು. ಅನುಮತಿ ನೀಡಲು ವಿವಿಧ ಇಲಾಖೆಗಳು ಅಲೆದಾಡಿಸುತ್ತಿವೆ. ಇದು ಕೊನೆಯ ಎಚ್ಚರಿಕೆ ಎಂದರು. ಶ್ರೀರಾಮಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಪ್ಪಣ್ಣ ದೆವಟಗಿ, ಮಂಜುನಾಥ, ರಾಜೇಶ್ರೀ ಜಡಿ ಇದ್ದರು.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *