Breaking News

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಡಾ. ಈಶ್ವರ ಉಳ್ಳಾಗಡ್ಡಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಡಾ. ಈಶ್ವರ ಉಳ್ಳಾಗಡ್ಡಿ ಅವರು ಇಂದು ತಮ್ಮ ಆಸನವನ್ನು ಅಲಂಕಾರ ಮಾಡಿದ್ದಾರೆ. ಡಾ ಈಶ್ವರ ಉಳ್ಳಾಗಡ್ಡಿ ಕೆಎಎಸ್ ಹಿರಿಯ ಅಧಿಕಾರಿಯಾಗಿದ್ದು, ಪಾಲಿಕೆಯ ನೂತನ ಆಯುಕ್ತರಾಗಿ ಬಡ್ತಿ ಪಡೆದು ಅಧಿಕಾರ ವಹಿಸಿಕೊಂಡರು. ಹುಬ್ಬಳ್ಳಿಯ ಪಾಲಿಕೆಯ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದು, ಕಚೇರಿಗೆ ಬರುತ್ತಿದ್ದಂತೆ ನೂತನ ಆಯುಕ್ತರನ್ನು ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಾಗತಿಸಿದರು. ಸರಳವಾಗಿ ಕಚೇರಿಯಲ್ಲಿ ನೂತನ ಆಯುಕ್ತರು ಅಧಿಕಾರ ಸ್ವೀಕಾರ ಮಾಡಿದರು. ಈ ಹಿಂದೆ ಅಧಿಕಾರದಲ್ಲಿ ಇದ್ದ ಗೋಪಾಲಕೃಷ್ಣ ಅವರ ವರ್ಗಾವಣೆ ನಂತರ ಖಾಲಿಯಾಗಿದ್ದ ಜಾಗೆಯಲ್ಲಿ ಭರತ್‌ ಎಸ್‌ ಅವರು ಹಾಲಿ ಪಾಲಿಖೆ ಆಯುಕ್ತರಾಗಿ ಅಧಿಕಾರದಲ್ಲಿ ಇದ್ದರು ಈ ನಂತರದಲ್ಲಿ ಈಶ್ವರ ಉಳ್ಳಾಗಡ್ಡಿ ಅವರಿ ಅಧಿಕಾ ಸ್ವೀಕಾರ ಮಾಡಿದ್ದಾರೆ. ಹೊಸದಾಗಿ ಅಧಿಕಾರ ಸ್ವೀಕಾರ ಮಾಡಿದ ಆಯುಕ್ತರು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಖೆಯನ್ನು ಯಾವ ರೀತಿಯಲ್ಲಿ ಉದ್ಧಾರ ಮಾಡುತ್ತಾರೆ ಎನ್ನುವದನ್ನು ಕಾದು ನೋಡಬೇಕಾದೆ.

Share News

About BigTv News

Check Also

ಕಮಿಷನರ್ ಬಂದಿದ್ದು 2–3 ದಿನ..! ಇನ್ಸ್‌ಪೆಕ್ಟರ್ ಯಾರು, ಪಿಎಸ್ಐ ಯಾರು ಅನ್ನೋದೇ ಗೊತ್ತಿಲ್ಲ..!

ಹುಬ್ಬಳ್ಳಿ-ಧಾರವಾಡ: ನೂತನ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಹುಬ್ಬಳ್ಳಿಗೆ ಬಂದು ಇನ್ನೂ ಎರಡರಿಂದ ಮೂರು ದಿನಗಳಷ್ಟೇ ಆಗಿದೆ… ಹೊಸ …

Leave a Reply

Your email address will not be published. Required fields are marked *