ಹುಬ್ಬಳ್ಳಿ : ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಕುಲಕರ್ಣಿ ಮನೆತನದಿಂದ ಕೆಂಪು ಗಣಪತಿ ಉತ್ಸವವು ಆ . 31 ರಿಂದ ಸೆ . 2 ರವರೆಗೆ ಮೂರು ದಿನಗಳ ನಡೆಯಲಿದೆ ರಾಮಚಂದ್ರ ಕುಲಕರ್ಣಿ ಮೋಹನರಾವ ಕುಲಕರ್ಣಿ ವಿನಾಯಕ ಕುಲಕರ್ಣಿ ,ನಾರಾಯಣರಾವ ಕುಲಕರ್ಣಿ ಸೋಮರಾವ ಕುಲಕರ್ಣಿ ವಿಶ್ವನಾಥ ಕುಲಕರ್ಣಿ ಹಾಗೂ ಮಾಲತೇಶ ಕುಲಕರ್ಣಿ ಅವರ ಮನೆಗಳಲ್ಲಿ ಅದ್ದೂರಿಯಾಗಿ ಉತ್ಸವ ಆಚರಿಸಲಾಗುತ್ತಿದೆ .
ಬಲಗೈಯಲ್ಲಿ ಮುರಿದ ದಂತ , ಎಡಗೈಯಲ್ಲಿ ಈಶ್ವರ ಲಿಂಗ ಹಾಗೂ ಉಳಿದೆರಡು ಕೈಗಳಲ್ಲಿ ಆಯುಧಗಳನ್ನು ಹೊಂದಿರುವುದು ಇಲ್ಲಿನ ಕೆಂಪು ಗಣಪತಿಯ ವಿಶೇಷವಾಗಿದೆ . ಮೈಸೂರು ಹಾಗೂ ಇಂದೋರ್‌ನ ಅರಮನೆಗಳಲ್ಲಿ ಮಾತ್ರ ಇಂತಹ ಗಣಪತಿಯನ್ನು ಕಾಣಬಹುದಾಗಿದೆ
ಉತ್ಸವದ ಮೊದಲ ದಿನ ಏಳು ಮನೆಗಳ ಗಣಪತಿಗಳನ್ನು ಮೆರವಣಿಗೆಯಲ್ಲಿ ತಂದು ಚಂದ್ರೋದಯದ ಸಮಯಕ್ಕೆ ಪ್ರತಿಷ್ಠಾಪಿಸಲಾಗುತ್ತದೆ . ಅಂದು ರಾತ್ರಿ 8.30 ರ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ . ನಂತರದ ಎರಡು ದಿನಗಳು ಭಕ್ತರಿಗೆ ಎಲ್ಲಾ ಮನೆಗಳಲ್ಲಿ ಉಚಿತ ದರ್ಶನ ಹಾಗೂ ಪ್ರಸಾದ ವ್ಯವಸ್ಥೆ ಇರಲಿದೆ . ಭಕ್ತರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

