*
ಹುಬ್ಬಳ್ಳಿ: ಕಾನೂನು ಸೇವೆಗಳ ಬೃಹತ್ ಶಿಬಿರದಲ್ಲಿ ಡಿಮ್ಹಾನ್ಸ್ ಸಂಸ್ಥೆಯ ಹಗಲು ಪಾಲನಾ ಕೇಂದ್ರದ ಮಳಿಗೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತ ಸಿ.ಎಮ್ ಹಾಗೂ ಜಿ.ಪಂ. ಸಿಇಒ ಡಾ.ಸುರೇಶ ಇಟ್ನಾಳ ಅವರು ಭೇಟಿ ನೀಡಿ, ಹಗಲು ಪಾಲನಾ ಕೇಂದ್ರದಲ್ಲಿ ತಯಾರಿಸಿದ ಸಾಮಾಗ್ರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನಸಿಕ ಅಸ್ವಸ್ಥರಿಗೆ ಹೊಲಿಗೆ ತರಬೇತಿ, ಮೇಣದ ಬತ್ತಿ ತರಬೇತಿ, ಕರ ಕುಶಲ ತರಬೇತಿ, ಅಲಂಕಾರಿಕಾ ವಸ್ತುಗಳ ತರಬೇತಿ, ತೋಟಗಾರಿಕೆ ತರಬೇತಿ, ಅಡುಗೆ ತರಬೇತಿ, ಸಾಮಾಜಿಕ ಕೌಶಲ್ಯಗಳ ತರಬೇತಿ ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಿರುವುದರ ಬಗ್ಗೆ ಮಾಹಿತಿ ಪಡೆದಕೊಂಡರು.
ಡಿಮ್ಹಾನ್ಸ್ ಸಂಸ್ಥೆಯ ಹಗಲು ಪಾಲನಾ ಕೇಂದ್ರದ ಮನೋವೈದ್ಯರಾದ ಡಾ.ಮಂಜುನಾಥ ಭಂಜಂತ್ರಿ, ಸಮಾಜ ಕಾರ್ಯಕರ್ತರಾದ ಅಶೋಕ ಕೋರಿ, ಆರ್.ಎಮ್.ತಿಮ್ಮಾಪೂರ, ಶ್ವೇತಾ ಮಣ್ಣೂರುಮಠ
ಅವರೊಂದಿಗೆ ಚರ್ಚಿಸಿದರು. ಮಾನಸಿಕ ಆರೋಗ್ಯ ಕುರಿತು ಶಿಬಿರದಲ್ಲಿ ಭಾಗವಹಿಸಿದ ಜನರಿಗೆ ಅರಿವು ಮೂಡಿಸಲಾಯಿತು.ಮಾನಸಿಕ ಆರೋಗ್ಯದ ಕುರಿತು ಭಿತ್ತಿಪತ್ರಗಳನ್ನು ವಿತರಿಸಲಾಯಿತು
bigtvnews | Hubli Dharwad News | Kannada News | Karnataka News Hubli News | News In Hubli | Local news

