ಐಎಂಎ ವಂಚನೆಯ ವಿರುದ್ದ ಸಿಡಿದ ಜನರು ಇಂದು ಬೀದಿಗೆ ಇಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರದಲ್ಲಿ ನಗರದ ಮೆಕ್ಕೆ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಿದರು. ರಸ್ತೆ ತಡೆ ನಡೆಸಿ ಐಎಂಎ ವಿರುದ್ದ ಧಿಕ್ಕಾರ ಕೂಗುತ್ತಿರುವ ಧರಣಿಕಾರರು ಮನ್ಸೂರ್ ಖಾನ್ ಬಂಧಿಸಿ ಶಿಕ್ಷಿಸಲು ಒತ್ತಾಯಿಸಿದರು. ಮನ್ಸೂರ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ ಟಿಪ್ಪು ಸೆಕ್ಯೂಲರ್ ಸೇನೆ ಮತ್ತು ರೈತ ಸಂಘಟನೆಗಳು ವಂಚನೆಗೊಳಗಾದವರಿಗೆ ಹಣ ವಾಪಸ್ ಕೊಡಿಸಲು ಸರ್ಕಾರಕ್ಕೆ ಒತ್ತಾಯ ಮಾಡಿದರು. ಈ ಒಂದು ಹೋರಾಟದಿಂದ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





