Breaking News

ಸೂತಕದ ಮನೆಗೆ ನೇರವಾದ ಶಾಸಕ ಜಿ ಟಿ ದೇವೇಗೌಡ

ಮೈಸೂರು: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆ ಮಾವಿನಹಳ್ಳಿಯ ಗ್ರಾಮಸ್ಥರೊಬ್ಬರನ್ನು ಬಲಿ ಪಡೆದಿದೆ.

ಜಯಪುರ ಗ್ರಾಮದ ಕಗ್ಗೆರೆ ಕೆರೆ ಶುಕ್ರವಾರ ಭರ್ತಿಯಾಗಿ ಕೋಡಿ ಹರಿದಿತ್ತು. ಇದರ ಸಮೀಪದಲ್ಲಿ ರಸ್ತೆ ದಾಟುವಾಗ ಮಾವಿನಹಳ್ಳಿಯ ಮಹೇಶ (45) ಎಂಬವರು ನೀರುಪಾಲಾಗಿದ್ದಾರೆ. ವಿಷಯ ತಿಳಿದು ಶಾಸಕ ಜಿ ಟಿ ದೇವೇಗೌಡರು ಮೃತ ಗ್ರಾಮಸ್ಥನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತನ ಪತ್ನಿಗೆ ವೈಯಕ್ತಿಕ 50 ಸಾವಿರ ರೂ.ಗಳ ನೆರವು ನೀಡಿ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಕೊಡಿಸುವ ಭರವಸೆ ನೀಡಿದರು. ಸ್ಥಳದಿಂದಲೇ ಜಿಲ್ಲಾಧಿಕಾರಿ ಜೊತೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ ಪ್ರಾಕೃತಿಕ ವಿಕೋಪದಡಿ ಗ್ರಾಮಸ್ಥನಿಗೆ ನೆರವು ಕಲ್ಪಿಸುವಂತೆ ಸೂಚಿಸಿದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *