Breaking News

ಮುರುಘಾಶ್ರೀಗಳ ವಿರುದ್ಧ ಕಿಡ್ನಾಪ್ ಕೇಸ್ ಕೂಡಾ ದಾಖಲಾಗಿದೆ : ಬೊಮ್ಮಾಯಿ


ಬೆಂಗಳೂರು : ಚಿತ್ರದುರ್ಗದ ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಅಡಿ ಒಂದು ಕೇಸ್ ದಾಖಲಾಗಿದೆ. ಅಲ್ಲದೆ ಕಿಡ್ನಾಪ್ ಕೇಸ್ ಕೂಡಾ ದಾಖಲಾಗಿದೆ. ಈ ಎರಡೂ ಕೇಸ್ ಗಳನ್ನೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುರುಘಾರಾಜೇಂದ್ರ ಶ್ರೀಗಳ ವಿರುದ್ಧ ಪೋಕ್ಸೋ ದೂರು ದಾಖಲು ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ದೃಷ್ಟಿಯಿಂದ ಈ ಹಂತದಲ್ಲಿ ಮಾತಾಡೋದು ಸೂಕ್ತ ಅಲ್ಲ. ಪೊಲೀಸರು ತನಿಖೆ ಮಾಡ್ತಿದ್ದಾರೆ, ಸತ್ಯ ಹೊರಗೆ ಬರುತ್ತದೆ ಎಂದು ಹೇಳಿದ್ದಾರೆ.

ಪೋಕ್ಸೋ ಅಡಿ ಒಂದು ಕೇಸ್ ದಾಖಲಾಗಿದೆ. ಕಿಡ್ನಾಪ್ ಕೇಸ್ ಕೂಡಾ ದಾಖಲಾಗಿದೆ. ಎರಡೂ ಕೇಸ್ ಗಳ ಕುರಿತು ಸಂಬಂಧಪಟ್ಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸಿಎಂ ತಿಳಿಸಿದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *