Breaking News

ಹುಬ್ಬಳ್ಳಿಯಲ್ಲಿ ರಾವಣ ನೃತ್ಯರೂಪಕ ಮೂಲಕ ಪ್ರದರ್ಶನ

ಹುಬ್ಬಳ್ಳಿ: ನಾಂಟ್ಯ ಜಲಿ ನೃತ್ಯ ಕಲಾ ಕೇಂದ್ರ ಶಿರಸಿಯ ವತಿಯಿಂದ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಗುರು ಡಾ|| ಸಹನಾ ಭಟ್ ಅವರ ನಿರ್ದೇಶನದಲ್ಲಿ “ರಾವಣ” ನೃತ್ಯ ರೂಪಕ ಅತ್ಯಂತ ಮನೋಹರವಾಗಿ ಮೂಡಿ ಬಂತು. ರಾವಣನ ಬಾಲ್ಯ ಜೀವನ, ಯೌವ್ವನಾವಸ್ಥೆ ಶಸ್ತ್ರ ಮತ್ತು ಶಾಸ್ತ್ರಾಭ್ಯಾಸ, ಸೀತಾಪಹರಣ ಸನ್ನಿವೇಶ, ರಾಮನೊಡನೆ ಯುದ್ಧ ಇತ್ಯಾದಿ ದೃಶ್ಯಾವಳಿಗಳನ್ನು ಕಲಾ ಕೇಂದ್ರದ ಸುಮಾರು 50 ಕಲಾವಿದರ ತಂಡವು ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಿದ್ದು ಕಲಾಭಿಮಾನಿಗಳಿಗೆ ರಸದೌತಣ ನೀಡಿತು. ಸಹನಾ ಭಟ್ ಅವರು ರಾವಣನ ಪಾತ್ರವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗಭೂಮಿ ನಿರ್ದೇಶಕ ಡಾ|| ಶಶಿಧರ ನರೇಂದ್ರ ಅವರು “ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಸಾಧನೆಯನ್ನು ಶ್ಲಾಘಿಸಿದರು”.

ಮುಖ್ಯ ಅತಿಥಿಗಳಾಗಿ ನೈರುತ್ಯ ರೈಲ್ವೆಯ ಮುಖ್ಯ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಹಾಗೂ ಹುಬ್ಬಳ್ಳಿಯ ಧನ್ಯೋಸ್ಮಿ ಯೋಗ ಕೇಂದ್ರದ ಗುರು ವಿನಾಯಕ ತಲಗೇರಿ ಅವರು ಆಗಮಿಸಿದ್ದರು.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *