Breaking News

ರಾಯಚೂರು ಜಿಲ್ಲೆಗೆ ನಿರಾಸೆ ಮೂಡಿಸಿದ ಕೇಂದ್ರ ಬಜೆಟ್


ರಾಯಚೂರು: ಜಿಲ್ಲೆಗೆ ಹೊಸದಾಗಿ ಏಮ್ಸ್‌ ಸಂಸ್ಥೆ, ಜವಳಿ ಪಾರ್ಕ್ ಘೋಷಣೆ, ವಿಮಾನ ನಿಲ್ದಾಣ ನಿರ್ಮಾಣ, ಐಐಐಟಿ, ರೈಲು ಯೋಜನೆಗಳು ಅನುದಾನ ನೀಡುವುದು ಹೀಗೆ ಹತ್ತು ಹಲವು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಕೇಂದ್ರ ಬಜೆಟ್‌ ಕೊನೆಗೂ ನಿರಾಸೆ ಮೂಡಿಸಿದೆ.

ದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(IIT)ಯಿಂದ ವಂಚಿತಗೊಂಡಿರುವ ಜಿಲ್ಲೆಗೆ ಹೆಸರಿಗೆ ಮಾತ್ರ ಐಐಐಟಿ ಸಂಸ್ಥೆಯನ್ನು ನೀಡಿರುವ ಕೇಂದ್ರವು ಕಳೆದ ನಾಲ್ಕು ವರ್ಷಗಳಿಂದ ಅನುದಾನ ನೀಡದೇ ನಿರ್ಲಕ್ಷ್ಯವಹಿದೆ. ಸ್ಥಳೀಯ ಯರಮರಸ್‌ನಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದ ಆನ್‌ಲೈನ್‌ ಮೂಲಕ ಟ್ರಿಪ್ಪಲ್‌ ಐಟಿ ತರಗತಿಗಳು ಆರಂಭಗೊಂಡಿವೆ. ಟ್ರಿಪ್ಪಲ್‌ ಐಟಿಗೆ ಐಟಿ-ಬಿಟಿ ಇಲಾಖೆಯಿಂದ 2.75 ಕೋಟಿ ರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 7.46 ಕೋಟಿ ರು. ಸೇರಿದಂತೆ ಒಟ್ಟಾರೆ 10.83 ಕೋಟಿ ರು. ಅನುದಾನ(Grants) ಮಂಜೂರಾಗಿದ್ದು, ಆದರೆ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಿ ಪೂರ್ಣ ಪ್ರಮಾಣದಲ್ಲಿ ಐಐಐಟಿ ನಡೆಸಲು ಅನುಕೂಲವಾಗಲಿದೆ ಎನ್ನುವ ಆಸೆ ಹೊಂದಿದ್ದ ಜನರಿಗೆ ನಿರಾಸೆಯಾಗಿದೆ.

ಹಿಂದುಳಿದ ಜಿಲ್ಲೆಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ರಾಯಚೂರು(Raichur) ಜಿಲ್ಲೆ ಆಯ್ಕೆಯಾಗಿ ಮೂರ್ನಾಲ್ಕು ವರ್ಷ ಗತಿಸುತ್ತಿದ್ದರು ಸಹ ವಿಶೇಷ ಅನುದಾನ ಕೊಟ್ಟಿಲ್ಲ. ಇದರಿಂದಾಗಿ ಜಿಲ್ಲೆಯ ಆರೋಗ್ಯ, ಶಿಕ್ಷಣ, ಕೃಷಿ ವಲಯಗಳಿಗೆ ಆರ್ಥಿಕ ಸೌಕರ್ಯ ಒದಗಿಸುವುದು, ಕೌಶಾಲ್ಯಾಭಿವೃದ್ಧಿಗೆ ಆದ್ಯತೆ, ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡವುದಕ್ಕೆ ಕಷ್ಟವಾಗುತ್ತಿದೆ.

Share News

About admin

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *